ಜನಮನ
ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ಕುಂದಾಪುರ

Views: 0
ಗ್ರಾಹಕ ಸಂಪಕ೯ ಸಭೆ
ಕುಂದಾಪುರ : ಒಟ್ಟು 25 ಶಾಖೆಗಳಿದ್ದು, 2025 ಕ್ಕೆ 1 ಸಾವಿರ ಕೋಟಿ ಗುರಿ ಹೊಂದಲಾಗಿದ್ದು, 10 ಕೋಟಿ ಲಾಭಾಂಶ, ಅರ್ಬನ್ ಬ್ಯಾಂಕ್ ಆಗಿ ಪರಿವರ್ತನೆ ಆಗಲಿದೆ. ಜತೆಗೆ ಮಾಚ್೯ 23 ಗೆ 9 ಕೋಟಿ 25 ಲಕ್ಷ ಗುರಿ ಹೊಂದಿರುತ್ತವೆ. ಕೋರ್ ಬ್ಯಾಂಕಿಂಗ್ ಅಳವಡಿಸಲಿದ್ದೇವೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಣೇಶ್ ಜಿ. ಕೆ ಹೇಳಿದರು.
ಕುಂದಾಪುರ ಶಾಖಾ ಪ್ರಬಂಧಕರಾದ ಶ್ರೀಮತಿ ಜಯಂತಿ ಅವರು ಮಾತನಾಡಿ, 31.3.22 ಶಾಖೆಯ ಠೇವಣಾತಿಯು ರೂ. 20 ಕೋಟಿ 60 ಲಕ್ಷ, ಸಾಲ ಮತ್ತು ಮುಂಗಡ 17 ಕೋಟಿ 10 ಲಕ್ಷ ಆಗಿರುತ್ತದೆ. ಒಟ್ಟು 37 ಕೋಟಿ 70 ಲಕ್ಷ ಮೀರಿರುತ್ತದೆ. 2022 ಮಾಚ೯ ಗೆ 43.08 ಲಕ್ಷ ನಿವ್ವಳ ಲಾಭ ಗಳಿಸಿದೆ. ಠೇವಣಾತಿಯು 23 ಕೋಟೆ 29 ಲಕ್ಷ ,ಸಾಲ ಮತ್ತು ಮುಂಗಡ 19 ಕೋಟಿ 67 ಲಕ್ಷ ದಾಟಿರುತ್ತದೆ. ಒಟ್ಟು ವ್ಯವಹಾರ 43 ಕೋಟಿ ಮೀರಿದೆ ಎಂದು ಹೇಳಿದರು.
ಅರುಣ ಕುಮಾರ್ ಶೆಟ್ಟಿ ಮಾತನಾಡಿ, ಸಹಕಾರದಿಂದ ಸಮೃದ್ಧಿ, ಸ್ವಾವಲಂಬನೆಯಿಂದ ಸದೃಡ ಸಮಾಜ ಮತ್ತು ಸುಖೀ ಜೀವನ ನಮ್ಮದಾಗಬೇಕು ಎಂದರು. ಸಭೆಯಲ್ಲಿ ನಿತ್ಯಾನಂದ ಶೆಟ್ಟಿ, ಸೀತಾರಾಂ ಶೆಟ್ಟಿ, ವೈ. ಸುರೇಂದ್ರ ಹೆಗ್ಡೆ, ಕೆಂಚನೂರು ಸೋಮ ಶೇಖರ್ ಶೆಟ್ಟಿ ಇದ್ದರು. ಗ್ರಾಹಕರ ಪರವಾಗಿ ಜಯಕರ್ ಶೆಟ್ಟಿ, ಸುಧಾಕರ ವಕ್ವಾಡಿ ಮಾತನಾಡಿದರು.
ಸಾಲ ಸೌಲಭ್ಯ ಕುರಿತು ನಾಗರಾಜ್ ಮಾಹಿತಿ ನೀಡಿದರು. ಶ್ರೀ ರಾಜಾರಾಂ ಕಾಯ೯ಕೃಮ ಸಂಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ. ಜಯರಾಜ್. ಬಿ .ರೈ ಅವರು ಎಲ್ಲಾ ಗ್ರಾಹಕರಿಗೆ ಯುಗಾದಿಯ ಶುಭಾಶಯ ಕೋರಿದರು







