ರಾಜ್ಯಾಧ್ಯಕ್ಷ ಆಯ್ಕೆ: ವಿಜಯೇಂದ್ರ, ಶೋಭಾ, ಹೆಸರು ಚಾಲ್ತಿಗೆ,ಪ್ರತಿಪಕ್ಷದ ನಾಯಕನಾಗಿ ಯತ್ನಾಳ?

Views: 0
ಬೆಂಗಳೂರು: ರಾಜ್ಯ ವಿಧಾನ ಮಂಡಲ ಅಧಿವೇಶನ ಜುಲೈ 3 ರಿಂದ ಆರಂಭವಾಗುತ್ತಿದ್ದು, ರಾಜ್ಯ ಬಿಜೆಪಿ ಶೀಘ್ರವೇ ರಾಜ್ಯಾಧ್ಯಕ್ಷ ಮತ್ತು ಪ್ರತಿ ಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಸಾಟಿಯಾದ ಪಕ್ಷವನ್ನು ಸಮರ್ಥಿಸಬೇಕಾದ, ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ,ಸದ್ಯ ಬಿಜೆಪಿಗೆ ಸವಾಲಾಗಿ ಕಾಡುತ್ತಿದೆ. ರಾಜ್ಯ ರಾಜಕಾರಣ ತಮ್ಮದೇ ದೃಷ್ಟಿಕೋನದಲ್ಲಿ ಬಿವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ ಹಾಗೂ ಸಿಟಿ ರವಿ , ಅಶ್ವಥ್ ನಾರಾಯಣ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಆದರೆ ಪಕ್ಷದ ವರಿಷ್ಠರು ಸುನಿಲ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡುವ ಬಗ್ಗೆ ಸದ್ಯಕ್ಕೆ ಆಸಕ್ತಿ ತೋರಿದ್ದಾರೆ .ಈ ಸ್ಥಾನಕ್ಕೆ ಐವರು ಆಕಾಂಕ್ಷಿಗಳಾಗಿದ್ದು ಅಶೋಕ್ ಮತ್ತು ಅಶ್ವಥ್ ನಾರಾಯಣ ಅವರಿಗೆ ತೀವ್ರ ವಿರೋಧಗಳಿಗೆ ರಾಜ್ಯದ್ಯಕ್ಷ ಮಾಜಿ ಸಚಿವ ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲು ದಿಲ್ಲಿ ನಾಯಕರು ಅದರಲ್ಲೂ ರಾಜ್ಯದ ಬಿಜೆಪಿಯಲ್ಲಿ ಅಸಂತೋಷಕ್ಕೆ ಕಾರಣರಾಗಿದ್ದಾರೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ .ಹೀಗಾಗಿ ಸದ್ಯ ಶೋಭ ಕರಂದ್ಲಾಜೆ ಮತ್ತು ವಿಜಯೇಂದ್ರ ಅವರ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ. ಇದು ಮುಂದೆ ಯಾವ ಕಡೆಗಾದರೂ ತಿರುಗಬಹುದು ಎಂದು ತಿಳಿಯಲಾಗಿದೆ
ಪ್ರತಿಪಕ್ಷ ಸ್ಥಾನಕ್ಕೆ ಪಕ್ಕಾ ರಾಜಕಾರಣಿಗೆ ನೀಡಬೇಕು ಎಂಬ ಚಿಂತನೆಯಲ್ಲಿ ಆರ್ ಎಸ್ ಎಸ್ ನಾಯಕರು ಆಸಕ್ತಿ ತೋರಿದ್ದಾರೆ ಈ ಬೆಳವಣಿಗೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ






