ಶಿಕ್ಷಣ

ಯೋಗಾಸನ ಸ್ಪರ್ಧೆಯಲ್ಲಿ ಯಡಾಡಿ-ಮತ್ಯಾಡಿಯ ಮುರಾರ್ಜಿ ದೇಸಾಯಿ ಶಾಲೆಯ ಸನ್ನಿಧಿ.ಆರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ 

Views: 46

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆ ಹಾಗೂ ಕೋಣಿ ಸರಕಾರಿ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 29.07.2026ರಂದು ಜರುಗಿದ ವಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯಡಾಡಿ-ಮತ್ಯಾಡಿಯ ಮುರಾರ್ಜಿ ದೇಸಾಯಿ ಶಾಲೆಯ ಸನ್ನಿಧಿ.ಆರ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಹಾಗೆಯೇ ಕಲಾತ್ಮಕ ಯೋಗಾಸನದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಶಿಕ್ಷಣ ಸಂಸ್ಥೆಗೆ ಹೆಸರನ್ನು ಪಡೆದಿರುತ್ತಾಳೆ. 

ಸಾಧನೆಗೈದ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ. 

ಸನ್ನಿಧಿ.ಆರ್ ಯಡಾಡಿ- ಮತ್ಯಾಡಿಯ ಮುರಾರ್ಜಿ ದೇಸಾಯಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕುಂದಾಪುರ ತಾಲೂಕಿನ ಹೂವಿನಕೆರೆ ರವೀಂದ್ರ ಶೆಟ್ಟಿಗಾರ್ ಮತ್ತು ಶಾರದಾ ದಂಪತಿಯ ಪುತ್ರಿ

Related Articles

Back to top button
error: Content is protected !!