ಇತರೆ
ಯುವತಿ ನಾಪತ್ತೆ

Views: 160
ಕಾರವಾರ ತಾಲೂಕಿನ ಕಾಜುಭಾಗ ಗ್ರಾಮದ ನಿವಾಸಿಯಾದ ಐಶ್ವರ್ಯ ರವೀಂದ್ರ ಕಾಂಬಳೆ (22) ಕೆಎಲ್ಇ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ.
ತಾಯಿ ಮನುಷ ರವೀಂದ್ರ ಕಾಂಬಳೆ ಅವರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
5 ಫೀಟ್ 8 ಇಂಚು ಎತ್ತರ, ಗೋಧಿ ಕೆಂಪು ಮೈಬಣ್ಣ, ಸದೃಡ ಮೈಕಟ್ಟು, ಕೊಂಕಣಿ, ಇಂಗ್ಲೀಷ್, ಮರಾಠಿ, ಕನ್ನಡ ಭಾಷೆ ಮಾತನಾಡುತ್ತಾರೆ.
ಯುವತಿ ಬಗ್ಗೆ ಮಾಹಿತಿ ದೊರಕಿದಲ್ಲಿ ಪೊಲೀಸ್ ಆಯುಕ್ತ ಬೆಳಗಾವಿ ನಗರ ಅಥವಾ ಪೊಲೀಸ್ ಇನ್ಸ್ಪೆಕ್ಟರ್ ಬೆಳಗಾವಿ ಇಲ್ಲಿಗೆ ದೂರು ಸಲ್ಲಿಸಬಹುದು.
ದೂರವಾಣಿ ಸಂಖ್ಯೆ( 0831 ) 280 5250. ಮೊ. 9480804106, 9480804047 ಗೆ ಸಂಪರ್ಕಿಸಬಹುದಾಗಿದೆ ಎಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






