ಜನಮನ

ಮಿಲಾಗ್ರಿಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ: 

Views: 0

ಉಡುಪಿ : ಅಂಬೇಡ್ಕರ್ ಅವರ ಜೀವನದ ಹೋರಾಟ ಆದರ್ಶ ಮತ್ತು ಪ್ರಾಮಾಣಿಕತೆ ಯುವ ಜನತೆಗೆ ಮಾದರಿಯಾಗಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ನುಡಿದರು. ಅವರು ಕಾಲೇಜಿನ ಇತಿಹಾಸ ವಿಭಾಗವು ಆಯೋಜಿಸಿದ ಅಂಬೇಡ್ಕರ್ ಕುರಿತು ರಸಪ್ರಶ್ನೆ ಕಾರ್ಯಕ್ರಮದ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜಯರಾಮ ಶೆಟ್ಟಿಗಾರ್, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ರೇಷ್ಮಾ, ಶ್ರೀಮತಿ ಆನ್ನಮ್ಮ, ಪ್ರತಿಮಾ, ಸಿಜರ್ ಗೊನಸಾಲ್ವಿಸ್ ಮೊದಲಾದವರು ಉಪಸ್ಥಿತರಿದ್ದರು. ಕು. ಸ್ಯಾಂಡ್ರಾ ಡಿಸೋಜ ರಸಪ್ರಶ್ನೆ ನಡೆಸಿಕೊಟ್ಟರೆ, ಕು. ಅಧೀನ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button
error: Content is protected !!