ರಾಜಕೀಯ

ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಜೈಲಾ?.. ಬೇಲಾ?.‌.ಇಂದು ಕೋರ್ಟ್ ತೀರ್ಪು  

Views: 20

ಬೆಂಗಳೂರು: ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸೋಮವಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.ನ್ಯಾಯಾಲಯ ಆದೇಶದ ಮೇಲೆ ರೇವಣ್ಣಗೆ ಜಾಮೀನು ಸಿಗಲಿದೆಯೇ ಅಥವಾ ಜೈಲು ಪಾಲಾಗುತ್ತಾರೆಯೇ ತೀರ್ಮಾನವಾಗಲಿದೆ.

ಮಾಜಿ ಸಚಿವರು  ಈಗಲೂ ಈ ಸಂಕಟದ ಸಮಯಕ್ಕೆ ವಿರಾಮ ಬಿದ್ದಿಲ್ಲ. ಅಂದ್ಹಾಗೆ ಜೈಲಿಂದ ಹೊರಬಂದು ಇವತ್ತಿಗೆ ಸಪ್ತದಿನ. ಈ ಸಪ್ತದಿನವೆಲ್ಲಾ ದೇವರು, ದೇವಸ್ಥಾನ ಅಂತ ಗಂಡಾಂತರ ಹೋಗಲಾಡಿಸಲು ಸುತ್ತಾಡಿದ್ದಾರೆ. ಇಂದು ಶುಭ ಸೋಮವಾರ ಬೇರೆ. ಕಾನೂನು ಸಮರದ ಅಂತಿಮಘಟ್ಟ. ಇದೊಂದು ಕಂಟಕದಿಂದ ಪಾರಾದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ

ಪ್ರಜ್ವಲ್‌ ರೇವಣ್ಣ ಮತ್ತು ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಚರ್ಚಿಸಲು ದೇವೇಗೌಡರ ಮನೆಗೆ ಮಾಜಿ ಸಿಎಂ ಹೆಚ್ಡಿಕೆಯತ್ತ ಧಾವಿಸಿದ್ರು. ಅದಾಗಿ ಕೆಲವೇ ನಿಮಿಷಗಳಲ್ಲಿ ರೇವಣ್ಣ ಸಹ ಎಂಟ್ರಿ ಕೊಟ್ಟಿದ್ರು, ಮನೆಯಲ್ಲಿ ದೇವೇಗೌಡ್ರು, ಕುಮಾರಸ್ವಾಮಿ, ರೇವಣ್ಣ ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ.

ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಟೆನ್ಷನ್ ಹೆಚ್ಚಿಸಿದೆ. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಷರತ್ತುಬದ್ದ ಜಾಮೀನು ನೀಡಿದ್ದ ಕೋರ್ಟ್, ಶುಕ್ರವಾರ ರೆಗ್ಯೂಲರ್ ಬೇಲ್ ಅರ್ಜಿ ವಿಚಾರಣೆ ನಡೆಸಿತ್ತು. ರೇವಣ್ಣ ಬೇಲ್ಗೆ ಎಸ್ಐಟಿ ಹೆಚ್ಚುವರಿ ಎಸ್ಪಿಪಿಗಳಾದ ಜಯ್ನಾ ಕೋಠಾರಿ ಹಾಗೂ ಅಶೋಕ್ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ಸಹ ಜಾಮೀನಿಗಾಗಿ ಪ್ರಬಲ ವಾದ ಮಂಡಿಸಿದ್ದಾರೆ. ಸುದೀರ್ಘ ವಾದ ಪ್ರತಿವಾದ ಆಲಿಸಿದ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಇಂದು ಜಾಮೀನು ತೀರ್ಪು ಕಾಯ್ದಿರಿಸಿದೆ.

ಗೌಡರ ನಿವಾಸದಲ್ಲಿ ರಹಸ್ಯ ಸಭೆ ನಡೆದಿದೆ. ಕೋರ್ಟ್‌ನಲ್ಲಿ ವಿಚಾರಣೆಗೆ ಅರ್ಜಿ ಬರಲಿದೆ. ಹೀಗಾಗೇ ಅರ್ಜಿ ವಿಚಾರಣೆಗೂ ಮುನ್ನ ಚರ್ಚೆ ಗೌಡರ ಬಳಿ ಸಲಹೆ ಸೂಚನೆ ಪಡೆದಿದ್ದಾರೆ.

 

Related Articles

Back to top button
error: Content is protected !!