ಇತರೆ
ಮಹಿಳೆ ಮೃತದೇಹ ಪತ್ತೆ: ಅನುಮಾನಸ್ಪದ ಸಾವಿನ ಬಗ್ಗೆ ತನಿಖೆ..!

Views: 183
ಬೆಂಗಳೂರು: ಮನೆಯಲ್ಲಿ ನಗ್ನವಾಗಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಕೊಡಿಗೇಹಳ್ಳಿಯ ಭದ್ರಪ್ಪ ಲೆಂಟ್ ನಲ್ಲಿ ನಡೆದಿದೆ.ಮೃತ ಮಹಿಳೆ ಶೋಭಾ ಎಂದು ತಿಳಿದು ಬಂದಿದೆ
ಶೋಭಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದರು. ಹೀಗೆ ಇಂದು ಮಗಳು ಎಷ್ಟೇ ಕರೆ ಮಾಡಿದರೂ ಶೋಭಾ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡ ಮಗಳು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಗ ಆಕೆಯ ತಾಯಿಯ ಮೃತದೇಹವು ಮನೆಯಲ್ಲಿ ಪತ್ತೆಯಾಗಿದೆ.
ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಇನ್ನು ಹೆಚ್ಚಿನ ವಿಚಾರ ತಿಳಿದು ಬರಬೇಕಾಗಿದೆ.






