ಇತರೆ

ಮಲಗಿದ್ದಲ್ಲೇ ಐವರ ಬರ್ಬರ ಕೊಲೆಗೈದು ಪರಾರಿ: ಶಂಕಿತ ಕೊಲೆ ಆರೋಪಿಗಳು ಇವರೇನಾ?

Views: 152

ಗದಗ: ಏಪ್ರಿಲ್ 19ರ ಮಧ್ಯರಾತ್ರಿ ಗದಗ ನಗರದ ದಾಸರ ಓಣಿಯಲ್ಲಿನ ಮನೆಯಲ್ಲಿ ಮಲಗಿಕೊಂಡಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷ (16) ಕೊಲೆಯಾದ ಕೊಲೆಯಾದ ದುರ್ದೈವಿಗಳು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಗದಗಕ್ಕೆ ಬಂದಿದ್ದರು. ಮೊದಲನೇ ಮಹಡಿಯ ಕೋಣೆಯಲ್ಲಿ ಪತಿ, ಪತ್ನಿ, ಮಗಳು ಮಲಗಿಕೊಂಡಿದ್ದರು. ಇದೇ ವೇಳೆ ಏಕಾಏಕಿ ಮನೆಯ ಹಿಂದಿರುವ ಕಿಡಕಿಯಿಂದ ಬಂದ ಹಂತಕರು ಕೊಲೆ ಮಾಡಿದ್ದಾರೆ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ವಿಡಿಯೋ ಒಂದು ವೈರಲ್ ಆಗಿದೆ. ಐದು ಜನ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ನಗರದ ಚೆನ್ನಮ್ಮ ಸರ್ಕಲ್ ಬಳಿಯ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯೆ ರಾತ್ರಿ 2.55 ಗಂಟೆ ಅಂಗಡಿ ಬಳಿ ನಡೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋಗಿರುವ ದುಷ್ಕರ್ಮಿಗಳೇ ಕೊಲೆ ಕೃತ್ಯದಲ್ಲಿ ಭಾಗಿ ಆಗಿದ್ದಾರಾ ಎಂಬ ಅನುಮಾನ ಮೂಡಿದೆ.

Related Articles

Back to top button
error: Content is protected !!