ಇತರೆ

ಮದುವೆಯಾಗುವುದಾಗಿ ಪ್ರೀತಿಯ ನಾಟಕವಾಡಿ ನಂಬಿಸಿ ಯುವತಿಗೆ ವಂಚನೆ : ಆರೋಪಿಗೆ ಜಾಮೀನು

Views: 103

ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ನಂತರ ಮದುವೆಗೆ ನಿರಾಕರಿಸಿದ ಆರೋಪಿಯನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

ಆರೋಪಿ ಹಾವೇರಿ ನಿವಾಸಿ ಹನುಮಂತ ಯಂಕಪ್ಪ ಲಮಾಣಿ ಪ್ರಸ್ತುತ ಕೊಲ್ಲೂರು ನಿವಾಸಿಯಾಗಿದ್ದು ಅಲ್ಲಿನ ಯುವತಿ ರಶ್ಮಿತಾ ಎನ್ನುವವರೊಡನೆ ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ನಡೆಸಿದ್ದು ನಂತರ ಮದುವೆಯಾಗಲು ನಿರಾಕರಿಸಿರುತ್ತಾನೆ. ನಂತರ ಪಿರ್ಯಾದಿ ರಶ್ಮಿತಾ ರವರು ಕೊಲ್ಲೂರು ಠಾಣೆಯಲ್ಲಿ 11/10/2025 ರಂದು ದೂರನ್ನು ನೀಡಿದ್ದು ಕೊಲ್ಲೂರು ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ನಂತರ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಯು ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಜಾಮೀನು ಮಂಜೂರು ಮಾಡಿರುತ್ತದೆ.ಆರೋಪಿಯ ಪರವಾಗಿ ಕುಂದಾಪುರ ನ್ಯಾಯವಾದಿ ಹಂದಕುಂದ ಅಶೋಕ್ ಶೆಟ್ಟಿ ವಾದಿಸಿದ್ದಾರೆ.

Related Articles

Back to top button
error: Content is protected !!