ಮದುವೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವು
Views: 30
ಕನ್ನಡ ಕರಾವಳಿ ಸುದ್ದಿ: ಮದುವೆ ಕಾರ್ಯಕ್ರಮದ ನಿಮಿತ್ತ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ದುರ್ಘಟನೆಯಾಗಿ ಮೃತಪಟ್ಟಿರುವ ಘಟನೆ ರಾಜಲ ಬಂಡಾ ತುಂಗಭದ್ರಾ ಅಣೆಕಟ್ಟಿನಲ್ಲಿ ನಡೆದಿದೆ.
ಮೃತಪಟ್ಟವರು ಉಮಾವತಿ ಗೋವಿಂದ(35), ರತ್ನ ಮಹಾಂತೇಶ್(28), ಶಿವಾನಂದ ಹನುಮಂತರಾಯ( 24) ಹಾಗೂ ಮಹಾಂತೇಶ್ ಪೀತಾಂಬರ (24) ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ಒಂದೇ ಕುಟುಂಬಸ್ಥರು ಎನ್ನಲಾಗಿದೆ.
ಆಂಧ್ರಪ್ರದೇಶದ ಕೋಸಗಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಎಂದು ತೆರಳುತ್ತಿದ್ದರು. ಮಾರ್ಗ ಮಧ್ಯೆ ಸ್ನಾನಕ್ಕೆ ಮುಂದಾದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಒಬ್ಬರನ್ನು ಉಳಿಸಲು ಹೋಗಿ ನಾಲ್ವರೂ ಸಾವು ?
ನದಿ ಪಾತ್ರದಲ್ಲಿ ನೀರಿನ ಆಳ ತಿಳಿಯದೆ ಒಬ್ಬರು ಸುಳಿಗೆ ಸಿಲುಕಿರಬಹುದು, ಅವರನ್ನು ರಕ್ಷಿಸಲು ಹೋದ ಉಳಿದ ಮೂವರು ಕೂಡ ಒಬ್ಬರ ಹಿಂದೆ ಒಬ್ಬರಂತೆ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಈಜಲು ಬಾರದೆ ಇರುವುದು ಅಥವಾ ನದಿಯ ತಳಭಾಗದ ಮರಳಿನ ಗುಂಡಿಗಳು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.






