ಮದುಮಗನ ಅಪ್ಪನನ್ನೇ ವರಿಸಿದ ವಧು! ಕಾರಣ ಕೇಳಿದರೆ ಶಾಕ್..!
Views: 404
ಕನ್ನಡ ಕರಾವಳಿ ಸುದ್ದಿ: ಸೊಸೆಯೊಬ್ಬಳು ತನ್ನ ಮಾವನನ್ನೇ ಮದುವೆಯಾದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ತಾನು ಮಾವನಿಂದಲೇ ಗರ್ಭಿಣಿಯಾಗಿದ್ದು, ಈ ಕಾರಣಕ್ಕೆ ಮದುವೆಯಾಗಿದ್ದಾಗಿ ಆಕೆ ಯಾವುದೇ ಅಂಜಿಕೆ ಇಲ್ಲದೆ ಹೇಳಿಕೊಂಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೊಸೆಯೊಬ್ಬಳು ಮಾವನನ್ನು ಮದುವೆಯಾಗಿದ್ದಾಳೆ. ಹಣೆ ತುಂಬ ದೊಡ್ಡ ತಿಲಕ ಇಟ್ಟುಕೊಂಡು ಹೂವಿನ ಹಾರ ಹಾಕಿಕೊಂಡು ಈಗತಾನೇ ಮದುವೆಯಾಗಿ ಬಂದಿರೋ ಮದುಮಗಳನ್ನು ಯಾರೋ ಪ್ರಶ್ನೆ ಮಾಡಿದ್ದಾರೆ. ಆಕೆ ಚಿಕ್ಕವಳು ಹಾಗೂ ವರ ವಯಸ್ಸಾದವ ಎಂದು ತೋರುತ್ತಿರುವ ಕಾರಣ, ಅವಳಿಗೆ ಪ್ರಶ್ನೆ ಮಾಡಲಾಗಿದೆ.
ಆಗ ಆ ಯುವತಿ ಯಾವುದೇ ನಾಚಿಕೆ, ಅಂಜಿಕೆ ಇಲ್ಲದೆಯೇ ಇವರು ನನ್ನ ಮಾವ, ನಾನು ಅವರ ಸೊಸೆ. ಈಗ ತಾನೇ ಮದುವೆಯಾಗಿದೆ ಎಂದಿದ್ದಾಳೆ. ಅದಕ್ಕೆ ಅವಳು ಕೊಟ್ಟಿರೋ ಕಾರಣ ಎಂದರೆ, ನಾನು ಈಗ ಗರ್ಭಿಣಿ. ಇವರಿಂದಲೇ ನಾನು ಗರ್ಭ ಧರಿಸಿದ್ದೇನೆ. ಗರ್ಭಿಣಿ ಎಂದು ತಿಳಿದಿದ್ದರಿಂದ ತರಾತುರಿಯಲ್ಲಿ ಮದುವೆಯಾಗಿದೆ ಎಂದಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದು ಯಾವ ಊರಿನದ್ದು, ಎಲ್ಲಿಯದ್ದು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಖುದ್ದು ಮದುಮಗಳೇ ಈ ಬಗ್ಗೆ ಹೇಳಿದ್ದಾಳೆ. ಅವಳು ಹೀಗೆ ಹೇಳುವಾಗ ಯಾವುದೇ ಅಂಜಿಕೆ ಇಲ್ಲ ಎನ್ನುವುದನ್ನು ನೋಡಬಹುದಾಗಿದೆ.






