ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್: ಸ್ರಜನಾತ್ಮಕತೆ ಕ್ರಿಯಾಶೀಲತೆ ಉತ್ತೇಜಿಸುವ ಕ್ಲಬ್ ಅವಾರ್ಡ್
Views: 505
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್, ಶಂಕರ ನಾರಾಯಣದಲ್ಲಿ ದಿನಾಂಕ 3.10.2025 ರಂದು ಕ್ಲಬ್ ಅವಾರ್ಡ್ ಕಾರ್ಯಕ್ರಮವನ್ನು ಅತ್ಯಂತ ವಿಶೇಷ ಹಾಗೂ ವಿಭಿನ್ನವಾಗಿ ನಡೆಸಲಾಯಿತು.
ಈ ಒಂದು ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕತೆ ಕ್ರಿಯಾಶೀಲತೆಯನ್ನು ಉತ್ತೇಜಿಸುವ ಮತ್ತು ಸಾಮೂಹಿಕವಾಗಿ ಜೊತೆಯಾಗಿ ಕಾರ್ಯನಿರ್ವಹಿಸುವ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಕೃತಿ, ಫಿಟ್ ಇಂಡಿಯಾ, ಪಂಚಮ ,ಆಯುರ್ಧಾಮ, ಎಲೆಕ್ಟ್ರೋ ಲಿಟರಸಿ, ಐಟಿ ಕ್ಲಬ್ ಗಳಂತಹ ವಿವಿಧ ರೀತಿಯ ಕ್ಲಬ್ ಗಳನ್ನು ರಚನೆ ಮಾಡಿ ಪ್ರತಿಯೊಂದು ಕ್ಲಬ್ಬಿಗು ಆಯಾಯ ವಿಷಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗಿದ್ದು ಪ್ರತಿಯೊಂದು ಕ್ಲಬ್ ಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಮೊದಲಾಗಿ ಪ್ರದರ್ಶನ ನೀಡಿದ ಆಯುರ್ಧಾಮ ಕ್ಲಬ್ ನ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಪಂಚಭೂತಗಳ ಕುರಿತು ಅರಿವು ಮೂಡಿಸಿದರು.
ಎಲೆಕ್ಟ್ರೋ ಲಿಟರಸಿ ಕ್ಲಬ್ ನವರು ಚುನಾವಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಧರಿತ್ರಿ ಮಿತ್ರ ಕ್ಲಬ್ ನ ವಿದ್ಯಾರ್ಥಿಗಳು ಪ್ರಾಕೃತಿಕ ಸೌಂದರ್ಯ ಹಾಗೂ ಪ್ಲಾಸ್ಟಿಕ್ ಬಳಕೆಯಿಂದಾಗುವ ಅನಾಹುತದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಜೇಡಿ ಮಣ್ಣಿನಿಂದ ವಿವಿಧ ವಿನ್ಯಾಸಗಳ ಆಕೃತಿಗಳನ್ನು ತಯಾರಿಸುವ ಮೂಲಕ ಆಕೃತಿ ಕ್ಲಬ್ ನ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯನ್ನು ಮೆರೆದರು. ಫಿಟ್ ಇಂಡಿಯಾ ಕ್ಲಬ್ ನ ವಿದ್ಯಾರ್ಥಿಗಳು ವಿವಿಧ ರೀತಿಯ ಯೋಗದ ಭಂಗಿಗಳನ್ನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ಐ ಟಿ ಕ್ಲಬ್ ಅವರು ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರೆ, ಪಂಚಮ ಕ್ಲಬ್ ನ ವಿದ್ಯಾರ್ಥಿಗಳು ಭಕ್ತಿಲಹರಿಯ ಗಾನಸುದೆಯ ಮೂಲಕ ಪ್ರೇಕ್ಷಕರಿಗೆ ಕರ್ಣಾನಂದವನ್ನುಂಟು ಮಾಡಿದರು. ಹೀಗೆ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಎಲ್ಲಾ ಕ್ಲಬ್ ನ ವಿದ್ಯಾರ್ಥಿಗಳು ವಿಭಿನ್ನವಾಗಿ ವಿಶೇಷವಾಗಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪ್ರಥಮ ಸ್ಥಾನವನ್ನು ಉತ್ತಮ ಗಾನಸುದೆಯನ್ನು ಹರಿಸಿದ ಪಂಚಮ ಕ್ಲಬ್ ತನ್ನ ಮುಡಿಗೇರಿಸಿಕೊಂಡಿತು. ದ್ವಿತೀಯಸ್ಥಾನವನ್ನು ಧರಿತ್ರಿ ಮಿತ್ರ ಕ್ಲಬ್ ಪಡೆದುಕೊಂಡಿತು. ವಿಭಿನ್ನವಾಗಿ ಪ್ರದರ್ಶನವನ್ನು ನೀಡಿ ಸಮಾನ ಅಂಕಗಳನ್ನು ಪಡೆದಿರುವ ಫಿಟ್ ಇಂಡಿಯಾ ಕ್ಲಬ್ ಹಾಗೂ ಎಲೆಕ್ಟ್ರೋ ಲಿಟರಸಿ ಕ್ಲಬ್ ಗಳು ತೃತೀಯ ಸ್ಥಾನವನ್ನು ಪಡೆದು ತೃಪ್ತಿಗೊಂಡವು. ಈ ಕಾರ್ಯಕ್ರಮದ ತೀರ್ಪುಗಾರಿಕೆಯನ್ನು ಆಡಳಿತ ಮಂಡಳಿಯವರಾದ ಕುಮಾರಿ ಶಮಿತಾ ರಾವ್ , ರೆನಿಟಾ ಲೋಬೊ ಹಾಗೂ ಪ್ರಾಥಮಿಕ ವಿಭಾಗದ ಸಂಯೋಜಕಿಯಾದ ದಿವ್ಯ ಪೂಜಾರಿ ವಹಿಸಿದ್ದರು . ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ತಂಡಗಳು ತಮ್ಮ ಗೆಲುವಿನ ಸಂಭ್ರಮವನ್ನು ಆಚರಿಸಿದರೆ ಉಳಿದ ತಂಡಗಳು ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಳ್ಳುವ ದೃಡ ನಿರ್ಧಾರವನ್ನು ಮಾಡಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಆಡಳಿತ ಮಂಡಳಿಯವರಾದ ಕುಮಾರಿ ಶಮಿತಾ ರಾವ್ ರವರು ಕಾರ್ಯಕ್ರಮವನ್ನು ಹಾಗೂ ವಿದ್ಯಾರ್ಥಿಗಳನ್ನು ಕುರಿತು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ವೇದಿಕೆ ಮೇಲೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುವುದು ಎಷ್ಟು ಮುಖ್ಯವೋ ಅದಕ್ಕೆ ಅನುಗುಣವಾಗಿ ಆ ಕಾರ್ಯಕ್ರಮಕ್ಕೆ ಸರಿಯಾದ ವೇಷ ಭೂಷಣಗಳ ಕಡೆ ಕೂಡ ಗಮನಹರಿಸುವುದು ಅಷ್ಟೇ ಮುಖ್ಯ ಇದು ನಿಮ್ಮನ್ನು ಗೆಲುವಿನಡೆಗೆ ಕೊಂಡಯುತ್ತದೆ ಎಂದು ಸಲಹೆ ನೀಡಿದರು. ಜೊತೆಗೆ ಗೆದ್ದಿರುವ ಕ್ಲಬ್ ನ ವಿದ್ಯಾರ್ಥಿಗಳನ್ನು ಅಭಿನಂದಿಸುವುದರೊಂದಿಗೆ ಇನ್ನುಳಿದ ಕ್ಲಬ್ ನ ವಿದ್ಯಾರ್ಥಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳಿದ್ದು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಬೇಕು ಎನ್ನುವ ಪ್ರೋತ್ಸಾಹದಾಯಕ ಮಾತುಗಳಾಡಿದರು.ಇನ್ನೋರ್ವ ಆಡಳಿತ ಮಂಡಳಿಯವರಾದ ಕುಮಾರಿ ರೆನಿಟಾ ಲೋಬೊರವರು ಪಾಠ ಪ್ರವಚನಗಳ ಮಧ್ಯೆ ಅತ್ಯಂತ ಕಡಿಮೆ ಸಮಯದಲ್ಲಿ ಉತ್ತಮ ಕಾರ್ಯಕ್ರಮವನ್ನು ನೀಡಿದ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಹಿರಿಯ ಪ್ರಾಥಮಿಕ ವಿಭಾಗದ ಸಂಯೋಜಕಿ ಕುಮಾರಿ ಅವಿನಾರವರು ಸ್ವಾಗತ ಹಾಗೂ ಧನ್ಯವಾದವನ್ನು ನಡೆಸಿಕೊಟ್ಟರು. ಆಯಾಯ ಕ್ಲಬ್ ನ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಸಕ್ರೀಯವಾದ ಪಾಲ್ಗೊಳ್ಳುವಿಕೆಯ ಮೂಲಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು.



















