ಮದಗದಲ್ಲಿ ಮುಳುಗಿ ಪ್ರಾಣತೆತ್ತ ಇಬ್ಬರ ಕಳೆಬರ ಅಂತ್ಯ ಸಂಸ್ಕಾರ : ಮೂವರನ್ನು ರಕ್ಷಿಸಿ ಪ್ರಾಣಬಿಟ್ಟ ಗುರುವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿಷ್ಯರು

Views: 21
ಕುಂದಾಪುರ ತಾಲೂಕಿನ ಕಂದಾವರ ಗ್ರಾಮ ಉಳ್ಳೂರು ಕಾಡಿನಕೊಂಡ ಎಂಬಲ್ಲಿ ಸೋಮವಾರ ಸಂಜೆ ಮದಗದಲ್ಲಿ ಮುಳುಗಿ ಪ್ರಾಣತೆತ್ತ ರಾಜೇಂದ್ರ ಶೆಟ್ಟಿಗಾರ ಮತ್ತು ಭರತ್ ಶೆಟ್ಟಿಗಾರ ಕಳೆಬರವನ್ನು ಉಳ್ಳೂರು ಕಾಡಿನಕೊಂಡ ಮತ್ತು ಶಂಕರನಾರಾಯಣದಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.
ಮದಗದಲ್ಲಿ ಮುಳುಗಿದ ವಿಷಯ ತಿಳಿಯುತ್ತಿದ್ದಂತೆ ಸೋಮವಾರ ಸಂಜೆ ಯಿಂದ ಮದಗದ ಸುತ್ತ ಮುತ್ತ ಜನಸೇರಿದ್ದರು. ಬೆಳಿಗ್ಗೆ ಕುಂದಾಪುರದಲ್ಲಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಮನೆಗೆ ತರುವಾಗ ಜನರು ಜಮಾಯಿಸಿ ಶೋಕ ಸಾಗರದಲ್ಲಿ ಮುಳುಗಿದೆ. ಶಂಕರನಾರಾಯಣ ಮದರ್ ಥರೆಸಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾಥಿ೯ಗಳು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು. ಮದಗದಲ್ಲಿ ಮುಳುಗಿದ ಮೂವರನ್ನು ರಕ್ಷಿಸಿ, ತಾನೇ ಪ್ರಾಣ ಬಿಟ್ಟಿದ್ದ ತಮ್ಮ ನೆಚ್ಚಿನ ಗುರುವನ್ನು ನೆನೆಸಿ ಕೊಂಡು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತನ್ನ ಅಜ್ಜಿ ಮನೆಗೆ ಬಂದು ಮದಗದಲ್ಲಿ ಪ್ರಾಣಬಿಟ್ಟ ಭರತ್ ಶೆಟ್ಟಿಗಾರ ಶವವನ್ನು ಹುಟ್ಟೂರಾದ ಶಂಕರನಾರಾಯಣ ಶಂಕಪುರದಲ್ಲಿ ಅಂತ್ಯಕ್ರಿಯೆ ನೆರವೇರಿತು.






