ರಾಜಕೀಯ

ಮತದಾನಕ್ಕೆ ಕ್ಷಣಗಣನೆ ಸಕಲ ಸಿದ್ಧತೆ 

Views: 0

ಮೇ. 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕೊನೆಯ ಕ್ಷಣದಲ್ಲಿ ನಡೆಯಬಹುದಾದ ಆಕ್ರಮಗಳನ್ನು ತಡೆಯಲು ವಿಶೇಷ ನಿಗಾ ವಹಿಸಲಾಗಿದೆ.

ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ಪೂಣ೯ಗೊಂಡಿದೆ. ಮೇ. 10 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತಕಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅಹ೯ರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹಣ, ಮಧ್ಯ, ಉಡುಗೊರೆಯಂತಹ ವಸ್ತುಗಳನ್ನು ಹಂಚುವ ಸಾಧ್ಯತೆ ಹಿನ್ನಲೆಯಲ್ಲಿ ತಪಾಸಣೆ ತೀವ್ರಗೊಂಡಿದೆ.

ಮತದಾನಕ್ಕೆ ವಿಶೇಷ ರೈಲು ಸಂಚಾರ: ಮತದಾನದಲ್ಲಿ ಪಾಲ್ಗೊಳ್ಳಲು ನೈರುತ್ಯ ರೈಲ್ವೆ ಯಶವಂತಪುರ- ಬಾರಕೂರು-ಬೈಂದೂರು ವಿಶೇಷ ರೈಲು ಸಂಚಾರ ಆರಂಭಿಸಿದೆ. ವಿಶೇಷ ರೈಲು ಮೇ. 9 ರಾತ್ರಿ 11.30 ಕ್ಕೆ ಬೆಂಗಳೂರಿನಿಂದ ರೈಲು ಹೊರಡಲಿದೆ.

ಮತದಾನಕ್ಕೆ ಬೇಕಾದ ದಾಖಲೆಗಳು: 

ಎಪಿಕ್ ಕಾಡ್೯, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಹಾಗೂ ಸರಕಾರ ನೀಡಿದ ಇನ್ನಿತರ ಗುರುತಿನ ಚೀಟಿ

ಮತದಾನಕ್ಕಾಗಿ ಸಾವ೯ಜನಿಕ ರಜೆ ಘೋಷಣೆ :ಮತದಾನ ಮಾಡಲು ಅನುಕೂಲವಾಗುವಂತೆ ಮೇ. 10 ಕೇಂದ್ರ, ರಾಜ್ಯ ಸರಕಾರಿ ಕಚೇರಿಗಳು, ಎಲ್ಲಾ ಖಾಸಗಿ ಸಂಸ್ಥೆಗಳಿಗೆ ಸಾವ೯ಜನಿಕ ರಜೆ ಘೋಷಿಸಲಾಗಿದೆ.

ಮಸ್ಟರಿಂಗ್/ ಡಿಮಸ್ಟರಿಂಗ್ : ಬೈಂದೂರು ವಿಧಾನ ಸಭಾ ಕ್ಷೇತ್ರ – ಸರಕಾರಿ ಪ. ಪೂ. ಕಾಲೇಜು ಬೈಂದೂರು , ಕುಂದಾಪುರ – ಭಂಡಾರ್ ಕಾಸ್೯ ಕಾಲೇಜು ಕುಂದಾಪುರ, ಉಡುಪಿ – ಸೈಂಟ್ ಸಿಸಿಲಿ ಕಾಲೇಜು, ಕಾಪು- ದಂಡತೀಥ೯ ಪ. ಪೂ. ಕಾಲೇಜು, ಕಾಕ೯ಳ ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರ. ದಜೆ೯ ಕಾಲೇಜು ಇಲ್ಲಿ ಮಸ್ಟರಿಂಗ್ ಡಿ ಮಸ್ಟರಿಂಗ್ ನಡೆಯಲಿದೆ. ಸುಗಮ ಚುನಾವಣೆಗಾಗಿ ಈ ಎಲ್ಲಾ ಸಿದ್ಧತೆಗಳು ಸಂಪೂರ್ಣಗೊಂಡಿದೆ.

Related Articles

Back to top button
error: Content is protected !!