ಇತರೆ
ಮಣಿಪಾಲ ಹೋಟೆಲ್ ಉದ್ಯಮಿ ಕೃಷ್ಣರಾಜ ಹೆಗ್ಡೆ ಆತ್ಮಹತ್ಯೆ

Views: 249
ಕನ್ನಡ ಕರಾವಳಿ ಸುದ್ದಿ: ಹೋಟೆಲ್ ಉದ್ಯಮಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಕಾರ್ಕಳದ ಬೈಲೂರು ಮೂಲದ ಉದ್ಯಮಿ ಕೃಷ್ಣರಾಜ ಹೆಗ್ಡೆ(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಮ್ಮ ಆತ್ರಾಡಿಯ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.