ಯುವಜನ

ಮಂಗಳೂರು :ಮೆಡಿಕಲ್ ಕಾಲೇಜಿನ ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಪತ್ತೆ : ಅಪ್ರಾಪ್ತ ಅರೆಸ್ಟ್!

Views: 151

ಮಂಗಳೂರು: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಪೊಲೀಸರು ಅಪ್ರಾಪ್ತ ನೋರ್ವನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಇಲ್ಲಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಮೇ‌ 6ರಂದು ಕಾಲೇಜಿನಲ್ಲಿ ನಡೆದಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ಪೊಲೀಸರಿಗೆ  ಅಪ್ರಾಪ್ತನೋರ್ವ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.

ಲೇಡಿಸ್ ಶೌಚಾಲಯಕ್ಕೆ ವಿದ್ಯಾರ್ಥಿನಿಯರು ತೆರಳಿದ ವೇಳೆ ಮೊಬೈಲ್ ರಿಂಗ್ ಆಗುವ ಸದ್ದು ಕೇಳಿ ಬಂದಿತ್ತಂತೆ. ಕೂಡಲೇ ಎಚ್ಚೆತ್ತುಕೊಂಡ ವಿದ್ಯಾರ್ಥಿಗಳು ಕಾಲೇಜಿನ ಸೆಕ್ಯುರಿಟಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವಾಚ್ ಮೆನ್ ಶೌಚಾಲಯ ಪರಿಶೀಲನೆ ನಡೆಸಿದ ವೇಳೆ ಮೊಬೈಲ್ ಇರುವ ಸಂಗತಿ ಬೆಳಕಿಗೆ ಬಂದಿದೆ.

ರೋಗಿಯಂತೆ ಬಂದಿದ್ದ ಅಪ್ರಾಪ್ತ ಬಾಲಕ

ಬಂಧಿತ ಅಪ್ರಾಪ್ತ ರೋಗಿಯಂತೆ ಚಿಕಿತ್ಸೆ ಪಡೆದುಕೊಳ್ಳುವ ನೆಪದಲ್ಲಿ ಮೆಡಿಕಲ್ ಕಾಲೇಜಿಗೆ ಆಗಮಿಸಿದ್ದನಂತೆ. ಬಳಿಕ ಲೇಡಿಸ್ ಟಾಯ್ಲೆಟ್ ಗೆ ಹೋಗಿ ಮೊಬೈಲ್ ಇಟ್ಟಿದ್ದನಂತೆ, ಆದರೆ ಮೊವೈಲ್ ರಿಂಗ್ ಆದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಕಾಲೇಜು ಆಡಳಿತ ಮಂಡಳಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿತ್ತು. ಕೂಡಲೇ ತನಿಖೆ ನಡೆಸಿದ ಪೊಲೀಸರಿಗೆ ಸಿಸಿಟಿವಿಯಲ್ಲಿ ಆರೋಪಿಯ ಚಲನವಲನ ಕಣ್ಣಿಗೆ ಬಿದ್ದಿದ್ದು, ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹದಿನೇಳು ವರ್ಷದ ಅಪ್ರಾಪ್ತ ಕೃತ್ಯ ನಡೆಸಿದ್ದು, ಯುವಕನನ್ನು ವಶಕ್ಕೆ ಪಡೆದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Related Articles

Back to top button
error: Content is protected !!