ಶಿಕ್ಷಣ

ಮಂಗಳೂರು: ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ನಾಪತ್ತೆ

Views: 39

ಉಳ್ಳಾಲ: ಮಂಗಳೂರು ನಗರದ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಫುಡ್ ಸೆಕ್ಯುರಿಟಿ ವಿಷಯದಲ್ಲಿ ಪಿಎಚ್‌ಡಿ ಸಂಶೋಧನ ಅಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಸಂಭವಿಸಿದೆ.

ನಾಪತ್ತೆಯಾದ ವಿದ್ಯಾರ್ಥಿ ಪುತ್ತೂರು ಮೂಲದ ಚೈತ್ರಾ (27) ಎಂದು ಗುರುತಿಸಲಾಗಿದೆ.

ಚೈತ್ರಾ ಕೋಟೆಕಾರು ಮಾಡೂರಿನ ಪಿ.ಜಿ.ಯಲ್ಲಿ ಸ್ನೇಹಿತೆಯೊಂದಿಗೆ ನೆಲೆಸಿದ್ದು, ಈಕೆಯ ತಂದೆ ನಿಧನ ಹೊಂದಿದ್ದಾರೆ. ಆಕೆ ಮಂಗಳೂರಿನಲ್ಲಿ ದೊಡ್ಡಪ್ಪನ ಮನೆಯಲ್ಲಿದ್ದು ಎಂಎಸ್ಸಿ ಪೂರೈಸಿದ್ದರು. ಸಂಶೋಧನೆಯ ಹಿನ್ನಲೆಯಲ್ಲಿ ಮಾಡೂರಿನಲ್ಲಿ ನೆಲೆಸಿದ್ದ ಚೈತ್ರಾ ಫೆ. 17ರಂದು ಬೆಳಗ್ಗೆ 9 ಗಂಟೆಗೆ ಪಿ.ಜಿ.ಯಿಂದ ತನ್ನ ಸ್ಕೂಟರ್‌ನಲ್ಲಿ ತೆರಳಿದ್ದು, ಮಾಡೂರಿಗೂ ಬರದೆ, ದೊಡ್ಡಪ್ಪನ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

ನಾಪತ್ತೆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!