ಇತರೆ
ಬ್ರಹ್ಮಾವರ ಬಾವಿ ಸ್ವಚ್ಛ ಮಾಡಲು ಇಳಿದ ಓರ್ವ ಸಾವು, ಮತ್ತೊಬ್ಬನ ರಕ್ಷಣೆ

Views: 92
ಬ್ರಹ್ಮಾವರ: ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರ ಪೈಕಿ ಆಮ್ಲಜನಕದ ಕೊರತೆಯಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ ಮಾಡಿದ ಘಟನೆ ಬುಧವಾರ ಸಂಜೆ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ಸಂಭವಿಸಿದೆ.
ಕೊಪ್ಪಳದ ನಿವಾಸಿ ಬ್ರಹ್ಮಾವರದ ಸಾಲಿಕೇರಿಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿರುವ ದುರ್ಗೇಶ್ (34) ಸಾವನ್ನಪ್ಪಿದವರು. ಜೊತೆಯಲ್ಲಿದ್ದ ಅಡಿವೆಪ್ಪ ಕುರಿ (50) ರಕ್ಷಣೆ ಮಾಡಲಾಯಿತು.
ಕೆಸರು ಇದೆ ಎಂದು 35 ಅಡಿ ಆಳದ ಬಾವಿಯೊಳಗೆ ಬ್ಲೀಚಿಂಗ್ ಪೌಡರ್‌ಹಾಕಿ ಸ್ವಚ್ಛ ಮಾಡುತ್ತಿದ್ದ ವೇಳೆ ಈ ದುರ್ಘಟನೆಗೆ ಆಮ್ಲಜನಕದ ಕೊರತೆಯಿಂದಾಗಿ ಉಸಿರುಗಟ್ಟಿ ಸಾವನಪ್ಪಲು ಕಾರಣ ಎಂದು ತಿಳಿದುಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






