ಇತರೆ

ಬ್ರಹ್ಮಾವರ:ಕಾರ್ಕಡದಿಲ್ಲಿ ಮಹಿಳೆಯೊಬ್ಬರು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Views: 109

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕೋಟ ಸಮೀಪ ಮಹಿಳೆಯೊಬ್ಬರು ಮನೆಯ ಹತ್ತಿರದ ಹಾಡಿಯಲ್ಲಿ ಮರಕ್ಕೆ ವೇಲ್‌ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ನಡೆದಿದೆ.

ಕಾರ್ಕಡ ಗ್ರಾಮ ಬ್ರಹ್ಮಾವರ ಶೈಲಾ (37) ಇವರು ಊಟ ಮಾಡಿ ಮನೆಯಿಂದ ಹೋಗಿದ್ದು ನೆರೆಕೆರೆಯಲ್ಲಿ ಮಲಗಿರಬಹುದೆಂದು ಎಲ್ಲಾ ಕಡೆ ಹುಡುಕಾಡಿದಾಗ ಬ್ರಹ್ಮಾವರ ತಾಲೂಕು ಕಾರ್ಕಡ ಗ್ರಾಮದ ಹಾಡಿಯಲ್ಲಿ ಮರಕ್ಕೆ ವೇಲ್‌ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ . ಮೃತ ಶೈಲಾರವರು ಜೀವನದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ವೇಲ್‌ ನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!