ಬೆಂಗಳೂರು :’ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಹೆಸರಲ್ಲಿ ರೇವ್ ಪಾರ್ಟಿ ಐವರು ಸೆರೆ

Views: 53
ಬೆಂಗಳೂರು,: ನಗರದ ಹೊರವಲಯದ ಹೆಬ್ಬಗೋಡಿಯ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ರೇವ್ ಪಾರ್ಟಿ ಸಂಬಂಧ ರಣಧೀರ್ (42)ಮೊಹಮ್ಮದ್ ಸಿದ್ದಿಕಿ(23)ವಾಸು(35)ಅರುಣ್ ಕುಮಾರ್(32)ಹಾಗೂ ನಾಗಬಾಬು((32)ಬಂಧಿತ ಆರೋಪಿಗಳಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು
ರೇವ್ ಪಾರ್ಟಿಯಲ್ಲಿ ತೆಲುಗಿನ ಪೋಷಕ ನಟಿ ಸಹ ಭಾಗಿಯಾಗಿದ್ದು, ಯಾವುದೇ ಜನಪ್ರತಿಧಿಗಳು ಭಾಗಿಯಾಗಿರಲಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಪಾರ್ಟಿ ನಡೆಯುತ್ತಿರುವುದನ್ನು ತಿಳಿದುಕೊಂಡು ಸಿಸಿಬಿ ಪೊಲೀಸರು, ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದ್ದಾರೆ. ಮಾದಕ ವಸ್ತು ಪತ್ತೆಗೆ ತರಬೇತಿ ಪಡೆದಿರುವ ಶ್ವಾನದಳದ ನೆರವು ಪಡೆಯಲಾಗಿದೆ. ನೂರಕ್ಕೂ ಅಧಿಕ ಜನ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ದಾಳಿ ವೇಳೆ ಮಾದಕ ಪದಾರ್ಥಗಳು ಪತ್ತೆಯಾಗಿವೆ. ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ. ಘಟನಾ ಸ್ಥಳವು ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ದಾಳಿ ಸಂದರ್ಭದಲ್ಲಿ ಪೋಷಕ ನಟಿಯೊಬ್ಬರು ವಿಡಿಯೋ ಮಾಡಿರುವುದರ ಕುರಿತು ’ಅವರು ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಆ ಬಗ್ಗೆ ಸಹ ತನಿಖೆ ಮಾಡಲಾಗುತ್ತಿದೆ. ಅಲ್ಲದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಅದರ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ತೆಲುಗು ನಟಿ ಹೇಮಾ ಕೂಡ ಪಾರ್ಟಿಯಲ್ಲಿ ಇದ್ದರು,ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂದು ಈ ರೇವ್ ಪಾರ್ಟಿಗೆ ಹೆಸರಿಡಲಾಗಿತ್ತು ಎನ್ನಲಾಗಿದ್ದು, ಸಂಜೆಯಿಂದ ಮುಂಜಾನೆವರೆಗೆ ಪಾರ್ಟಿ ಮಾಡುವ ಆಲೋಚನೆ ಇತ್ತು. ಪಾರ್ಟಿ ವೇಳೆ ಎಂಡಿಎಂಎ ಪಿಲ್ಸ್, ಹೈಡ್ರೋ ಗಾಂಜಾ, ಕೊಕೇನ್ ಸೇರಿ ಇತರ ಮಾದಕವಸ್ತುಗಳನ್ನು ಮಾರಾಟ ಮಾಡಲಾಗಿದೆ.
ಪಾರ್ಟಿಯಲ್ಲಿ ಸಿದ್ದಿಕ್, ರಣ್ ದೀರ್, ರಾಜ್ ಭಾವ ಡ್ರಗ್ಸ್ ಮಾರಾಟ ಮಾಡಿದ್ದರು. ಮುಂಜಾನೆ 3 ಗಂಟೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು,ಪಾರ್ಟಿಯಲ್ಲಿ ಹೇಮಾ ಕೂಡ ಇದ್ದರು, ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ.
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಶೀಘ್ರವೇ ಸಿಸಿಬಿ ನೋಟಿಸ್ ನೀಡಲಿದೆ. ಆ ಬಳಿಕ ನಿಗದಿ ಪಡಿಸಿದ ದಿನಾಂಕದಂದು ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಂದಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ವಿಚಾರಣೆ ಮಾಡಿ ಸಿಸಿಬಿ ಹೇಳಿಕೆ ದಾಖಲು ಮಾಡಿಕೊಳ್ಳಲಿದೆ. ಈ ವೇಳೆ ಹೇಮಾ ಅವರಿಗೂ ನೋಟಿಸ್ ಜಾರಿ ಆಗಲಿದೆ.
ರೇವ್ ಪಾರ್ಟಿಯಲ್ಲಿ ಭಾಗಿಯಾದವರ ಹೆಸರಲ್ಲಿ ಹೇಮಾ ಹೆಸರು ಕೇಳಿ ಬರುತ್ತಿದ್ದಂತೆ ಒಂದು ಐಡಿಯಾ ಮಾಡಿದ್ದರು. ಅದೇ ಫಾರ್ಮ್ ಹೌಸ್‌ನ ಖಾಲಿ ಜಾಗಕ್ಕೆ ತೆರಳಿದ್ದ ಅವರು, ‘ನಾನು ರೇವ್ ಪಾರ್ಟಿ ನಡೆದ ಫಾರ್ಮ್?ಹೌಸ್?ನಲ್ಲಿ ಇಲ್ಲ. ನಾನು ಇರುವುದು ಹೈದರಾಬಾದ್?ನ ಫಾರ್ಮ್‌ಹೌಸ್‌ನಲ್ಲಿ’ ಎಂದು ಸುಳ್ಳು ಹೇಳಿದ್ದರು. ಈಗ ಅದು ಸುಳ್ಳು ಎನ್ನುವುದು ಗೊತ್ತಾಗಿದೆ.






