ಬಿರುಗಾಳಿ ಸಹಿತ ಸುರಿದ ಮಳೆಗೆ ಕಾರಿನ ಮೇಲೆ ಮರ ಬಿದ್ದು ಯುವಕ ಸಾವು

Views: 129
ಮಂಡ್ಯ : ಬಿರುಗಾಳಿ ಸಹಿತ ಸುರಿದ ಮಳೆಗೆ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಯುವಕನೊಬ್ಬ ದುರ್ಮರಣಕ್ಕೀಡಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಆಸ್ಪತ್ರೆ ರಸ್ತೆಯಲ್ಲಿ ನಡೆದ ದುರಂತದಲ್ಲಿ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯನ ಪುತ್ರ ಕಾರ್ತಿಕ್ (28) ಸಾವನ್ನಪ್ಪಿದ ದುರ್ದೇವಿಯಾಗಿದ್ದು, ಈತನ ಜೊತೆ ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ,
ರಾತ್ರಿ ಗಾಳಿ ಸಹಿತ ಮಳೆ ಬಿದ್ದ ವೇಳೆ ಮರ ಓಮ್ನಿ ಕಾರ್ ಮೇಲೆ ಬಿದ್ದ ಪರಿಣಾಮ ಕಾರ್ತಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ ಹುಟ್ಟುಹಬ್ಬ ಮಂಗಳವಾರ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರಾದ ಸುನೀಲ್ ಮತ್ತು ಚೇರನಹಳ್ಳಿ ಮಂಜು ಜೊತೆ ಮಂಡ್ಯ ನಗರಕ್ಕೆ ಓಮ್ನಿ ಕಾರಿನಲ್ಲಿ ಬಟ್ಟೆ ಖರೀದಿಸಲು ಬಂದಿದ್ದರು, ಸೋಮವಾರ ರಾತ್ರಿ 8 ಸಮಯದಲ್ಲಿ ಗಾಳಿ ಸಮೇತ ಮಳೆ ಆರಂಭಗೊಂಡಾಗ ಮರ ಕಾರಿನ ಮೇಲೆ ಬಿದ್ದಿದೆ.
ತಕ್ಷಣ ಸಾರ್ವಜನಿಕರು ರಕ್ಷಣೆಗೆ ಮುಂದಾಗಿದ್ದು ಅಷ್ಟರಲ್ಲಿ ನಜ್ಜು ಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ್ದ ಕಾರ್ತಿಕ್ ಸಾವನ್ನಪ್ಪಿದ್ದು, ಇನ್ನಿಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಮಿಮ್ಸ್ ಶವಗಾರಕ್ಕೆ ರವಾನಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.






