ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳಿಗೆ ‘ನೀಲಿ ದಿನಾಚರಣೆ’ ಆಚರಣೆ

Views: 139

ಕನ್ನಡ ಕರಾವಳಿ ಸುದ್ದಿ: ಬಸ್ರೂರು  ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳಿಗೆ ‘ನೀಲಿ ದಿನಾಚರಣೆ’ ಯನ್ನು ನ.22ರಂದು ಆಚರಿಸಲಾಯಿತು.

ಮಕ್ಕಳು ನೀಲಿ ಬಣ್ಣದ ಉಡುಪುಗಳನ್ನು ಧರಿಸುವುದರೊಂದಿಗೆ ನೀಲಿ ಬಣ್ಣವನ್ನು ಆಚರಿಸಿದರು.

ನೀಲಿ ಬಣ್ಣದ ಆಟಿಕೆ ಹಾಗೂ ಕ್ರಾಫ್ಟ್ ತಮ್ಮೊಂದಿಗೆ ತೆಗೆದುಕೊಂಡು ಬಂದು ಸಂಭ್ರಮಿಸಿದರು . ಮಕ್ಕಳು ತಮ್ಮೊಂದಿಗೆ ತಂದಿರುವ ಕ್ರಾಫ್ಟ್ ಹಾಗೂ ನೀಲಿ ಬಣ್ಣದ ವಿವಿಧ ವಸ್ತು ಹಾಗೂ ಆಟಿಕೆಗಳಿಂದ ಅಲಂಕರಿಸಲಾಯಿತು .ಮಕ್ಕಳು ತಾವು ತಂದಿರುವ ಆಟಿಕೆ ಹಾಗೂ ವಸ್ತುವಿನ ಬಗ್ಗೆ ಮಾತನಾಡುವುದರೊಂದಿಗೆ ಬಣ್ಣವನ್ನು ಪರಿಚಯಿಸಿದರು

ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಇವರು ನೀಲಿ ಬಣ್ಣದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು ಶಾಲಾ ಆಡಳಿತಾಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಅಡಪರವರು ಉಪಸ್ಥಿತರಿದ್ದರು.

Related Articles

Back to top button
error: Content is protected !!