ಜನಮನ
ಬಂಟಕಲ್ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಅಪಘಾತದಲ್ಲಿ ಸಾವು
Views: 0

ಉಡುಪಿ: ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಮಂಗಳೂರು ನಿವಾಸಿ, ಆನಂತೇಶ್ ರಾವ್ ( 40 ) ಶುಕ್ರವಾರ ಹೊನ್ನಾವರದಲ್ಲಿ ನಡೆದ ಕಾರು ಮತ್ತು ಕಂಟೈನರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉಡುಪಿಯಿಂದ ಸೋದೆ ಮಠಕ್ಕೆ ತೆರಳುತ್ತಿರುವ ವೇಳೆ ಅವರ ಕಾರು ಕಂಟೈನರ್ ಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತರ ಪತ್ನಿ ಶ್ರೀಪ್ರಿಯ ಮಂಗಳೂರು ಎಂ. ವಿ. ಶೆಟ್ಟಿ ಎಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಮತ್ತು ಪುತ್ರನನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀಥ೯ ಶ್ರೀ ಪಾದರು, ಕಾಯ೯ದಶಿ೯ ರತ್ನ ಕುಮಾರ್, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಸಂತಾಪ ಸೂಚಿಸಿದ್ದಾರೆ.






