ಯುವಜನ

ಪ್ರೀತ್ಸೆ.. ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ…ಆಕೆ ಗರ್ಭಿಣಿ ಎಂದು ತಿಳಿಯುತ್ತಲೇ ನಾಪತ್ತೆ!

Views: 35

ಕನ್ನಡ ಕರಾವಳಿ ಸುದ್ದಿ: 18 ವರ್ಷದ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿ, ನಂತರ ಆಕೆಯ ಗರ್ಭವತಿ ಎಂದು ತಿಳಿದ ಕೂಡಲೇ ದುಷ್ಕರ್ಮಿಯೋರ್ವ ಆಕೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

18 ವರ್ಷದ ಕಾಲೇಜು ವಿದ್ಯಾರ್ಥಿನಿ ಯುವತಿಗೆ ಆರೋಪಿ ಹರೀಶ್ ಎಂಬಾತ ಮೋಸ ಮಾಡಿದ್ದು, ಈ ಸಂಬಂಧ ಸಂತ್ರಸ್ಥ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಮೂಲಗಳ ಪ್ರಕಾರ ಪ್ರೀತ್ಸೆ ಪ್ರೀತ್ಸೆ ಎಂದು ಆಕೆ ಹಿಂದೆ ಬಿದ್ದಿದ್ದ ಹರೀಶ್ ಬಳಿಕೆ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಬಲವಂತವಾಗಿ ಆಕೆಯನ್ನು ಸುಮಾರು 4 ತಿಂಗಳ ಕಾಲ ಲೈಂಗಿಕವಾಗಿ ಬಳಸಿಕೊಂಡ ಆತ ಆಕೆ ಗರ್ಭಿಣಿ ಎಂಬ ವಿಚಾರ ತಿಳಿದ ಕೂಡಲೇ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ಥೆಯನ್ನು ಆಕೆಯ ಕಾಲೇಜಿನಿಂದ ಮನೆಗೆ ಬಿಡುವಾಗ ಹರೀಶ್ ಮತ್ತು ಯುವತಿ ನಡುವೆ ಪರಿಚಯವಾಗಿದೆ. ಬಳಿಕ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಕಳೆದ ವರ್ಷ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಅಂತೆಯೇ ದಂಪತಿಗಳು ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ಜೀವನ ನಡೆಸಲು ಆರಂಭಿಸಿದ್ದರು.

ಮದುವೆಯಾದ ಹೊಸತರಲ್ಲಿ ಎಲ್ಲವೂ ಸಾಮಾನ್ಯವಾಗಿಯೇ ಇತ್ತ. ಆದರೆ ದಿನಗಳು ಕಳೆದಂತೆ ಹರೀಶನ ವರ್ತನೆ ಕೂಡ ಬದಲಾಯಿತು. ಮನೆಯಲ್ಲಿ ಹರೀಶ್ ಯುವತಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಅಲ್ಲಿ ಆಕೆ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು.

ಈ ನಡುವೆ ಯುವತಿ ಗರ್ಭಧರಿಸಿದ್ದು ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ಹರೀಶ್ ಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಆತಂಕಕ್ಕೊಳಗಾದ ಹರೀಶ್ ಆಕೆಗೆ ಮಾಹಿತಿ ನೀಡದೇ ಮನೆಯಿಂದ ಪರಾರಿಯಾಗಿದ್ದಾನೆ. ಹರೀಶ್ ಗಾಗಿ ಕಾಯುತ್ತಿದ್ದ ಸಂತ್ರಸ್ಥೆ ಕೊನೆಗೆ ಬೇರೆ ದಾರಿ ಕಾಣದೇ ತನ್ನ ತಾಯಿಯ ಮನೆಗೆ ಮರಳಿದಳು.

ಏಪ್ರಿಲ್ 12 ರಂದು ಆಕೆ ಮಗುವಿಗೆ ಜನ್ಮ ನೀಡಿದ್ದು, ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಹೆರಿಗೆಯಾದ ಸ್ವಲ್ಪ ಸಮಯದ ನಂತರ ಮಗು ಸಾವನ್ನಪ್ಪಿತು. ನಂತರ ಮಹಿಳೆ ಹರೀಶ್ ವಿರುದ್ಧ ವಂಚನೆ, ಹಲ್ಲೆ ಮತ್ತು ಮದುವೆ ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿ ಹರೀಶ್ ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪ್ರಕರಣದ ಕುರಿತು ತನಿಖೆ ನಡೆಸಿದ್ದಾರೆ.

Related Articles

Back to top button
error: Content is protected !!