ಇತರೆ

ಪ್ರೀತಿಸಿ ಮದುವೆಯಾಗಿದ್ದ ನವದಂಪತಿ  ಆತ್ಮಹತ್ಯೆಗೆ ಶರಣು!

Views: 154

ವಿಜಯಪುರ :ಕಳೆದ 4 ವರ್ಷಗಳ ಹಿಂದೆಯೇ ಪ್ರೀತಿಸಿದ ಜೋಡಿ  ನಾಲ್ಕು ತಿಂಗಳ ಹಿಂದಷ್ಟೆ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ವಿಜಯಪುರ ನಗರದ ಹೊರವಲಯದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

ಮನೋಜ್‌ ಪೋಳ್‌ (30)  ರಾಖಿ(25 ) ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ಜೋಡಿ

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರಾತ್ರಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಊರಿಗೆ ಹೋಗಿದ್ದ ಕುಟುಂಬಸ್ಥರು ಬೆಳಗಿನ ಜಾವ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮನೋಜ್‌ ಹಾಗೂ ರಾಖಿ ನಡುವೆ ಸಣ್ಣ ಪುಟ್ಟ ಜಗಳ ನಡೆದಿದಿತ್ತು. ಆದ್ರೆ ನಿನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು ಬಳಿಕ ಮನೋಜ್‌ ಚಿಕ್ಕಪ್ಪ ಮನೆಗೆ ಬಂದು ಇಬ್ಬರಿಗೂ ಸಮಾಧಾನ ಹೇಳಿದ್ದರು.ತಡರಾತ್ರಿ ಇಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ, ಬೆಳಿಗ್ಗೆ ಕುಟುಂಬಸ್ಥರು ನೋಡಿದಾಗ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ದ ಮನೋಜ್‌ ಹಾಗೂ ರಾಖಿ 4 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.ಜಾತಿ ಬೇರೆಯಾಗಿದ್ದರಿಂದ ಕುಟುಂಬಸ್ಥರ ವಿರೋಧದ ನಡುವೆ 2 ವರ್ಷಗಳ ಹಿಂದೆ  ರಜಿಸ್ಟರ್‌ ಮದುವೆಯಾಗಿದ್ದರು.  ಅದ್ದೂರಿಯಾಗಿ ರಿಸಪ್ಷನ್‌ ಮಾಡಿಕೊಂಡಿದ್ದರು.  ಅನ್ಯೋನ್ಯತೆಯಿಂದ ಇದ್ದ ಜೋಡಿ ದಿಢೀರ್‌ ಆತ್ಮಹತ್ಯೆಗೆ ಶರಣಾಗಿದ್ದು ಅಚ್ಚರಿ ಮೂಡಿಸಿದೆ.

ಜಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಚ್ಚಿನ ತನಿಖೆಯನ್ನು  ಕೈಗೊಂಡಿದ್ದಾರೆ.

Related Articles

Back to top button
error: Content is protected !!