ಇತರೆ

ಪ್ರೀತಿಗಾಗಿ ಲಿಂಗ ಬದಲಾಯಿಸಿಕೊಂಡ ಟ್ರಾನ್ಸ್‌ಜೆಂಡರ್‌: ಮದುವೆ ನಿರಾಕರಿಸಿ ಕೈಕೊಟ್ಟ ಪ್ರಿಯಕರ!

Views: 74

ಕನ್ನಡ ಕರಾವಳಿ ಸುದ್ದಿ:ಪ್ರೀತಿಸಿದ ಯುವಕನಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತನ್ನ ಲಿಂಗವನ್ನೇ ಬದಲಾಯಿಸಿಕೊಂಡು ಯುವತಿಯಾದ ಟ್ರಾನ್ಸ್‌ಜೆಂಡರ್‌ಗೆ ಕೊನೆಗೆ ಪ್ರಿಯಕರನಿಂದ ಮೋಸ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆಗ್ರಾದಲ್ಲಿ ಯುವಕನೊಬ್ಬ ಪರಿಚಯವಾಗಿದ್ದು, ಇವರ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ಆ ಯುವಕನ ಮೇಲಿನ ಗಾಢವಾದ ಪ್ರೀತಿಯಿಂದಾಗಿ, ಆತನನ್ನೇ ಮದುವೆಯಾಗುವ ಕನಸು ಕಂಡ ಆ ವ್ಯಕ್ತಿ ಸುಮಾರು 3 ಲಕ್ಷ ರೂಪಾಯಿ ಖರ್ಚು ಮಾಡಿ ವಿಭಿನ್ನ ಹಂತಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಯುವತಿಯಾಗಿ ರೂಪುಗೊಂಡರು. ಈ ಸರ್ಜರಿಗಳ ನೋವನ್ನು ಸಹಿಸಿಕೊಂಡು, ಹೇಗಾದರೂ ಮಾಡಿ ಆ ಯುವಕನನ್ನು ಮದುವೆಯಾಗಬೇಕೆಂಬ ಒಂದೇ ಒಂದು ಆಶೆಯಿಂದ ಈ ಸಾಹಸ ಮಾಡಿದ್ದರು.

ಆದರೆ ಲಿಂಗ ಬದಲಾಯಿಸಿಕೊಂಡ ಬಳಿಕ ಆ ಯುವಕ ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಇದರಿಂದ ಮೋಸಹೋದ ಆ ಟ್ರಾನ್ಸ್‌ಜೆಂಡರ್ ಯುವತಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಸಂಗತಿಯನ್ನು ಕಳೆದ ಒಂದೂವರೆ ವರ್ಷದಿಂದ ತನ್ನಿಂದ ಮುಚ್ಚಿಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಷ್ಟೇ ಅಲ್ಲದೆ, ಆ ಯುವಕ ತನ್ನಿಂದ ಹಂತ ಹಂತವಾಗಿ ಸುಮಾರು 10 ಲಕ್ಷ ರೂಪಾಯಿ ಹಣವನ್ನೂ ಸಹ ಕಿತ್ತುಕೊಂಡಿದ್ದಾನೆ ಎಂದು ಯುವತಿ ದೂರಿದ್ದಾಳೆ. ಪ್ರೀತಿಯನ್ನು ನಂಬಿ ಲಿಂಗ ಬದಲಾಯಿಸಿಕೊಂಡು, ಹಣವನ್ನೂ ಕಳೆದುಕೊಂಡು ಇಂದು ಆಕೆಗೆ ಆ ಪ್ರಿಯಕರನೂ ಇಲ್ಲ, ಹಣವೂ ಇಲ್ಲದಂತಾಗಿದ್ದು, ನ್ಯಾಯಕ್ಕಾಗಿ ಈಗ ಪೊಲೀಸರ ಮೊರೆ ಹೋಗಿದ್ದಾಳೆ.

Related Articles

Back to top button
error: Content is protected !!