ಇತರೆ

ಪ್ರಿಯಕರ ನಮ್ಮ ಜೊತೆ ಇರಬೇಕು ಗಂಡ ಒಪ್ಪಿಗೆ ನೀಡಬೇಕು ಎಂದು ವಿದ್ಯುತ್ ಕಂಬ ಏರಿದ ಮೂರು ಮಕ್ಕಳ ತಾಯಿ..!

Views: 406

ವಿವಾಹವಾದ ಬಳಿಕವೂ ಮಹಿಳೆ ಮತ್ತೊಬ್ಬನ ಪ್ರೀತಿಸಿ ಆತನೂ ಬೇಕು ಗಂಡನೂ ಬೇಕು, ಮಕ್ಕಳು ಬೇಕು ಎಂದು ರಂಪಾಟ ಮಾಡಿ ಆಕೆ ಮದುವೆಯಾದ ಮೇಲೆ ಬರೋಬ್ಬರಿ 10 ವರ್ಷ ಯುವಕನೊಬ್ಬನನ್ನು ಪ್ರೀತಿಸಿ ಈಗ ಆತನ ಜೊತೆಗಿರಲು ಗಂಡನ ಒಪ್ಪಿಸಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿದ್ದಾಳೆ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 34 ವರ್ಷದ ಮಹಿಳೆಯೊಬ್ಬರು ಸಿನಿಮಾದಲ್ಲಿ ಕಂಡುಬರುವ ಡ್ರಾಮಾ ಆಡಿರುವುದು ಅಲ್ಲಿದ್ದ ಜನರಿಗೂ ಅಚ್ಚರಿ ಮೂಡಿಸಿದೆ. ಆಕೆ ತನ್ನ ಪ್ರಿಯಕರನು ಸಹ ನಮ್ಮ ಜೊತೆ ಇರಬೇಕು ಇದಕ್ಕೆ ಗಂಡ ಒಪ್ಪಿಗೆ ನೀಡಬೇಕು ಎಂದು ಹಠ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಟ್ರಾನ್ಸ್ ಫಾರ್ಮರ್ ಕಂಬ ಏರಿದ ಘಟನೆ ನಡೆದಿದೆ.

ಮದುವೆಯಾಗಿ ಮೂರು ಮಕ್ಕಳಿರುವ ಆಕೆ ಅದೇ ಊರಿನ ಯುವಕನೊಬ್ಬನ ಪ್ರೀತಿಸಿದ್ದಳು, ಪತಿ ರಾಮ್‌ ಗೋವಿಂದ್‌ಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದಾಗ ಮನೆಯಲ್ಲಿ ಕೋಪಗೊಂಡು ಗಲಾಟೆ ಮಾಡಿದ್ದಾನೆ. ಆದ್ರೆ ಆಮೇಲೆ ಆಗಿದ್ದೇ ಬೇರೆ. ಗಂಡ ಗಲಾಟೆ ಮಾಡಿದ್ದರಿಂದ ಪತ್ನಿ ಸರಿಯಾಗುತ್ತಾಳೆ ಎಂದುಕೊಂಡರೆ ಆಕೆಯ ಡ್ರಾಮಾ ಆರಂಭವಾಗಿದ್ದೇ ಅಲ್ಲಿಂದ.

ನಾನು ಪ್ರಿಯಕರನ ಬಿಟ್ಟು ಇರುವುದಿಲ್ಲ, ಆತನೂ ನಮ್ಮ ಜೊತೆ ಇದೇ ಮನೆಯಲ್ಲಿ ಇರಬೇಕು ಎಂದು ಹಠ ಹಿಡಿದಿದ್ದಾಳೆ. ಇದಕ್ಕೆ ಯಾವ ಪತಿ ತಾನೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಮತ್ತಷ್ಟು ಕೆರಳಿದ ಗಂಡ ಬೈದು ಪತ್ನಿಯನ್ನು ಹೊರಗಟ್ಟಿದ್ದಾನೆ. ಆದ್ರೆ ಆಕೆ ಪಟ್ಟು ಬಿಡದೆ ಹಠ ಹಿಡಿದು ಪ್ರಿಯಕರ ನಮ್ಮ ಜೊತೆ ಇರದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ವಿದ್ಯುತ್ ಕಂಬ ಏರಿದ್ದಾಳೆ. ಇದರಿಂದ ಭಯಗೊಂಡ ಸ್ಥಳೀಯರು ವಿದ್ಯುತ್ ಇಲಾಖೆಗೆ ಕರೆ ಮಾಡಿ ಕರೆಂಟ್ ತೆಗೆಸಿದ್ದಾರೆ.

ಪ್ರಿಯಕರನ ಮನೆಗೆ ಕರೆಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು. ಈ ವೇಳೆ ನೆರೆದಿದ್ದ ಜನ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆಕೆಯನ್ನು ಕೆಳಗಿಳಿಸುವ ಪ್ರಯತ್ನ ಮಾಡಿದರು ಯಶಸ್ವಿಯಾಗಲಿಲ್ಲ. ಗಂಟೆಗಳ ಕಾಲ ಸಿಬ್ಬಂದಿ ಹರಸಾಹಸಪಟ್ಟು ಆಕೆಯ ಬೇಡಿಕೆ ಈಡೇರಿಸೋದಾಗಿ ಭರವಸೆ ನೀಡಿದ ಬಳಿಕ ಆಕೆ ವಿದ್ಯುತ್ ಕಂಬದಿಂದ ಕೆಳಗಿಳಿದು ಬಂದಿದ್ದಾಳೆ ಎಂದು ತಿಳಿದುಬಂದಿದೆ.

 

Related Articles

Back to top button
error: Content is protected !!