ಪ್ರಿಯಕರನ ಜತೆ ನವವಿವಾಹಿತೆ ಪರಾರಿ: ಪತಿ, ಸೋದರ ಮಾವ ನೇಣಿಗೆ ಶರಣು
Views: 148
ಕನ್ನಡ ಕರಾವಳಿ ಸುದ್ದಿ: ವಿವಾಹವಾದ ಎರಡೂವರೆ ತಿಂಗಳಲ್ಲೇ ಪ್ರಿಯತಮನ ಜತೆ ಪತ್ನಿ ಓಡಿ ಹೋಗಿದ್ದರಿಂದ ಮನನೊಂದ ಪತಿ ಮತ್ತು ಮಹಿಳೆಯ ಸೋದರ ಮಾವ ಇಬ್ಬರೂ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಗುಮ್ಮನೂರು ಹರೀಶ್ (32) ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡರೆ, ಈ ಸುದ್ದಿ ತಿಳಿದ ನವವಿವಾಹಿತೆಯ ಸೋದರ ಮಾವ, ದಾವಣಗೆರೆ ಸಮೀಪದ ಆನೆಕೊಂಡದ ರುದ್ರೇಶ್ ಸಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರೀಶ್ ಸರಸ್ವತಿ ಅವರ ವಿವಾಹ ಎರಡೂವರೆ ತಿಂಗಳ ಹಿಂದೆ ನಡೆದಿತ್ತು. 4 ದಿನದ ಹಿಂದೆ ದೇವಸ್ಥಾನಕ್ಕೆ ಹೋಗಿ ಬರುವು ದಾಗಿ ಹೇಳಿ ಹೋದ ಸರಸ್ವತಿ ನಾಪತ್ತೆ ಯಾಗಿದ್ದರು. ಬಳಿಕ ಪ್ರಿಯಕರನ ಜತೆ ಓಡಿ ಹೋಗಿರುವುದು ಬಹಿರಂಗ ಗೊಂಡಿತ್ತು. ಮನನೊಂದು ಡೆತ್ ನೋಟ್ ಬರೆದಿಟ್ಟು ಹರೀಶ್ ಆತ್ಮಹತ್ಯೆ ಬೆನ್ನಲ್ಲೇ ರುದ್ರೇಶ್ ಸಹ ಹರೀಶ್ ಹಾದಿ ಹಿಡಿದಿದ್ದಾರೆ.
ಡೆತ್‌ನೋಟ್ ಪತ್ತೆ: ‘ಪತ್ನಿ ಓಡಿ ಹೋಗಿದ್ದಾಳೆ. ನಾನೇ ಹಿಂಸೆ ನೀಡುತ್ತಿದ್ದೇನೆ ಎಂದು ಆರೋಪ ಮಾಡಿದ್ದಾಳೆ. ಆಕೆಯ ಸಂಬಂಧಿಕರು ಜೀವ ಬೆದರಿಕೆಯೊಡ್ಡಿದ್ದಾರೆ. ನಾನು ತಪ್ಪು ಮಾಡಿಲ್ಲ. ನನಗೆ ಮಾನ– ಮರ್ಯಾದೆ ಮುಖ್ಯ’ ಎಂದು ಹರೀಶ್ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರ ಸಿಕ್ಕಿದೆ.
‘ಸರಸ್ವತಿಯ ಪ್ರಿಯಕರ ಕುಮಾರ್, ಹರೀಶ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ. ಇದರಿಂದ ನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರಸ್ವತಿ, ಆಕೆ ಪೋಷಕರು ಹಾಗೂ ಕುಮಾರ್ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಹರೀಶ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದಾವಣಗೆರೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






