ರಾಜಕೀಯ

ಪ್ರಜ್ವಲ್ ರೇವಣ್ಣ ತಿಂಗಳ ಬಳಿಕ ಮೊದಲ ಭಾರಿಗೆ ಪ್ರತ್ಯಕ್ಷ !! ವಿಡಿಯೋದಲ್ಲಿ ಹೇಳಿದ್ದೇನು?

Views: 128

ಬೆಂಗಳೂರು: ಸತತ ಒಂದು ತಿಂಗಳ ಬಳಿಕ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರು ಇಡೀ ಪ್ರಕರಣದ ಬಗ್ಗೆ ಮೊದಲ ಬಾರಿಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ಅವರು, ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ. ಇದೇ ಶುಕ್ರವಾರ ಬೆಂಗಳೂರಿಗೆ ಬಂದು ಮೇ 31ರಂದು ಎಸ್‌ಐಟಿ ಮುಂದೆ ಹಾಜರಾಗಲಿದ್ದೇನೆ. ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಎದುರಿಸಲು ನಾನು ಸಿದ್ಧ ಎಂದಿದ್ದಾರೆ.

ಪ್ರಜ್ವಲ್‌ ವಿಡಿಯೋದಲ್ಲಿ ಹೇಳಿದ್ದೇನು?

ಎಲ್ಲರಿಗೂ ನಮಸ್ಕಾರ.. ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ತಾತನಿಗೆ, ನನ್ನ ಕುಮಾರಣ್ಣನಿಗೆ, ನಾಡಿನ ಜನತೆಗೆ ಮತ್ತು ನನ್ನ ಎಲ್ಲ ಕಾರ್ಯತರ್ಕರಿಗೆ ಕ್ಷಮಾಪಣೆ ಕೇಳಲು ಬಂದಿದ್ದೇನೆ. ನಾನು ಫಾರಿನ್ನಲ್ಲಿ ಎಲ್ಲಿ ಇದ್ದೇನೆ ಅಂತ ಸರಿಯಾಗಿ ಮಾಹಿತಿ ನೀಡಿರಲಿಲ್ಲ. 26ರ ಚುನಾವಣೆ ನಡೆದಂತ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿ ಇರಲಿಲ್ಲ. ಎಸ್ಐಟಿ ಕೂಡ ರಚನೆಯಾಗಿರಲಿಲ್ಲ. 26ರಂದು ವಿದೇಶಕ್ಕೆ ಹೋಗುವ ಬಗ್ಗೆ ಪ್ರೀ ಪ್ಲಾನ್ ಆಗಿತ್ತು. ಹಾಗಾಗಿ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ.

ನಾನು ವಿದೇಶದಲ್ಲಿದ್ದಾಗ ನ್ಯೂಸ್ ನೋಡಿ ನನ್ನ ಮೇಲೆ ಆರೋಪ ಬಂದಿರುವುದು ಕಂಡುಬಂದಿದೆ. ಎಸ್ಐಟಿ ನೋಟಿಸ್ಗೂ ಕೂಡ ನಾನು ಟ್ವೀಟ್ ಹಾಗೂ ವಕೀಲರ ಮುಖಾಂತರ 7 ದಿನ ಸಮಯ ಹೇಳಿದ್ದೆ. ಇದಾದ ನಂತರ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲ ವೇದಿಕೆ ಮೇಲೆ ಈ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದರು.

ಇದನ್ನು ನೋಡಿ, ಕೇಳಿ ನಾನು ಡಿಪ್ರೆಶನ್ಗೆ ಹೋಗಬೇಕಾಯಿತು. ಹಾಗಾಗಿ ನಾನು ಮೊದಲನೆಯದಾಗಿ ಕ್ಷಮೆ ಕೇಳಿದ್ದೇನೆ. ಹಾಸನದಲ್ಲಿ ಕೂಡ ಕೆಲವರು ಸೇರಿಕೊಂಡು ರಾಜಕೀಯ ಪಿತೂರಿ ಮಾಡುವಂತಹ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ನೋಡಿದ ಅವರು ಕೆಲವು ಕೇಸ್ಗಳಲ್ಲಿ ನನ್ನನ್ನು ಭಾಗಿ ಮಾಡಿದ್ದಾರೆ.

ಹೀಗಾಗಿ ಯಾರು ಕೂಡ ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ. ನಾನೇ ಮೇ 31ನೇ ತಾರೀಖು ಶುಕ್ರವಾರದಂದು SIT ಮುಂದೆ ಬಂದು ಉತ್ತರ ನೀಡುತ್ತೇನೆ. ಹಾಗೇ ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿ ಕೂಡ ನನ್ನ ಮೇಲೆ ಇರುವ ಸುಳ್ಳು ಪ್ರಕರಣಗಳಿಂದ ಆಚೆ ಬರುವಂತಹ ಕೆಲಸ ಮಾಡುತ್ತೇನೆ. ದೇವರ, ಜನರ ಹಾಗೂ ಕುಟುಂಬಸ್ಥರ ಆರ್ಶಿವಾದ ನನ್ನ ಮೇಲೆ ಇರಲಿ. ಮೇ 31ನೇ ತಾರೀಖು ಶುಕ್ರವಾರದಂದು ಬಂದ ಕೂಡಲೇ ಇದಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತೇನೆ.

Related Articles

Back to top button
error: Content is protected !!