ಇತರೆ

ಪೊಲೀಸ್‌‍ ಕಸ್ಟಡಿಯಲ್ಲಿ ದಂಪತಿ ಆತಹತ್ಯೆ :ಉದ್ರಿಕ್ತ ಗುಂಪು ಠಾಣೆ ದ್ವಂಸ

Views: 121

ಪಾಟ್ನಾ- ಪೊಲೀಸ್‌‍ ಕಸ್ಟಡಿಯಲ್ಲಿ ದಂಪತಿ ಆತಹತ್ಯೆ ಮಾಡಿಕೊಂಡಿರುವುದನ್ನು ಖಂಡಿಸಿ ಉದ್ರಿಕ್ತ ಗುಂಪು ಠಾಣೆಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯ ತಾರಾಬರಿ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ತನ್ನ ಪತ್ನಿಯ ಮರಣದ ನಂತರ ಆತ ತನ್ನ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದನು. ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಆರೋಪದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದರು

ಮದುವೆಯಾದ ಕೂಡಲೇ ಪುರುಷ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿ ಅವರನ್ನು ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೊಲೀಸ್‌‍ ಲಾಕಪ್‌ನ ಸಿಸಿಟಿವಿ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಲಾಕಪ್‌ ಬಾಗಿಲಿಗೆ ಹತ್ತಿ ಬಟ್ಟೆಯಿಂದ ನೇಣು ಬಿಗಿದುಕೊಂಡಿರುವುದನ್ನು ಕಾಣಬಹುದಾಗಿದೆ.

ಇಬ್ಬರ ಸಾವಿನ ಸುದ್ದಿಯು ಪ್ರದೇಶದಲ್ಲಿ ಹರಡುತ್ತಿದ್ದಂತೆ ಕೋಪಗೊಂಡ ಗ್ರಾಮಸ್ಥರು ತಾರಾಬರಿ ಪೊಲೀಸ್‌‍ ಠಾಣೆಯನ್ನು ಸುತ್ತುವರೆದು ಪೊಲೀಸ್‌‍ ಸಿಬ್ಬಂದಿ ಮೇಲೆ ಕಲ್ಲು ತೂರಿದರು. ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸ್‌‍ ಠಾಣೆಯನ್ನು ಧ್ವಂಸಗೊಳಿಸಿ, ನಂತರ ಬೆಂಕಿ ಹಚ್ಚಿದ್ದಾರೆ ಘಟನೆಯಲ್ಲಿ ಕನಿಷ್ಠ ಐವರು ಪೊಲೀಸ್‌‍ ಸಿಬ್ಬಂದಿ ಗಾಯಗೊಂಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸದರ್‌ ಎಸ್‌‍ಡಿಪಿಒ ರಾಂಪುಕರ್‌ ಸಿಂಗ್‌ ಸೇರಿದಂತೆ ಹಲವು ಪೊಲೀಸ್‌‍ ಠಾಣೆಗಳ ಪೊಲೀಸ್‌‍ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರ ಥಳಿತ ನಂತರದ ನಿರ್ಲಕ್ಷ್ಯದಿಂದ ದಂಪತಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ಇಲ್ಲಿಯವರೆಗೆ ನಿರಾಕರಿಸಿದ್ದಾರೆ.

Related Articles

Back to top button
error: Content is protected !!