ಇತರೆ

ಪಿಜಿಯಲ್ಲಿ ಅಡುಗೆ ಭಟ್ಟರನ್ನು ಚಾಕುವಿನಿಂದ ಇರಿದು ಕೊಲೆ

Views: 0

ಪಿಜಿಯಲ್ಲಿ ಅಡುಗೆ ಭಟ್ಟರನ್ನು ಚಾಕುವಿನಿಂದ ಇರಿದು ಕೊಲೆ

ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್ ನಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಅಡುಗೆ ಭಟ್ಟ ರವಿ ಭಂಡಾರಿ (44 ) ಎಂದು ಗುರುತಿಸಲಾಗಿದೆ.

ಪಿಜಿಯಲ್ಲಿ ಅಡುಗೆ ಭಟ್ಟರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಪದ್ಮಾವತಿಯೊಂದಿಗೆ ಅಡುಗೆ ಭಟ್ಟರು ಅನ್ಯೋನ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಪದ್ಮಾವತಿ ಅವರ ಮಗ ಇರಿದು ಕೊಲೆ ಮಾಡಿದ್ದಾನೆ.

ಪದ್ಮಾವತಿಯರ ಮಗ ರಾಹುಲ್ ರವಿ ಭಂಡಾರಿಗೆ ಕರೆ ಮಾಡಿ ನಿನ್ನ ಜೊತೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡಿದ್ದ, ನಂತರ ಚಾಕುವಿನಿಂದ ಇರಿದು ರವಿ ಭಂಡಾರಿಯನ್ನು ಹತ್ಯೆ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿಯಲಾಗಿದೆ.

Related Articles

Back to top button
error: Content is protected !!