ಪತ್ನಿಯನ್ನು ತುಂಡು ತುಂಡಾಗಿ ಕತ್ತರಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಇಟ್ಟಿದ್ದ ಹಂತಕ..!

Views: 89
ಲಂಡನ್: ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ ಆಘಾತಕಾರಿ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ.
ನಿಕೋಲಸ್ ಮೆಟ್ಸನ್ (28) ಕೊಲೆ ಮಾಡಿದ ಆರೋಪಿ ಪತಿ.ನಿಕೋಲಸ್ ಮೆಟ್ಸನ್ ಎಂಬ ವ್ಯಕ್ತಿಯು ಪತ್ನಿ ಹಾಲಿ ಬ್ರಾಮ್ಲಿ (26) ಮಾರ್ಚ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಇಟ್ಟಿದ್ದನಂತೆ. ದಿನ ಕಳೆದಂತೆ ಸ್ನೇಹಿತನಿಗೆ 5 ಸಾವಿರ ರೂಪಾಯಿ ಕೊಟ್ಟು ಪತ್ನಿಯ ದೇಹದ ತುಂಡುಗಳನ್ನು ನದಿಗೆ ಎಸೆಯಲು ತಿಳಿಸಿದ್ದನಂತೆ. ಇನ್ನು, ತನ್ನ ಮಗಳಿಗೆ ಮದುವೆಯಾಗಿ ಕೇವಲ 16 ತಿಂಗಳುಗಳಾಗಿದೆ. ಆಕೆಯ ಗಂಡ ಒಂದು ದಿನವೂ ಆಕೆಗೆ ನಮ್ಮನ್ನು ಭೇಟಿಯಾಗಲು ಅವಕಾಶ ಕೊಟ್ಟಿರಲಿಲ್ಲ ಎದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಮಾರ್ಚ್ 24 ರಂದು ಪೊಲೀಸರು ಆರೋಪಿಯ ಮನೆಗೆ ಹೋದಾಗ ಆತನು ತನ್ನ ಹೆಂಡತಿ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಆಕೆ ಕಚ್ಚಿದ ಕಲೆಯನ್ನು ತೋರಿಸಿದ್ದನಂತೆ. ಕೆಲವು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತೆಯರ ಜತೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸರಿಗೆ ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ಬಳಿಕ ಬಾತ್ ಟಬ್ನಲ್ಲಿ ರಕ್ತದ ಕಲೆಗಳನ್ನು ಕಾಣಿಸಿವೆ. ಜೊತೆಗೆ ಬ್ಲೀಚ್ನ ವಾಸನೆ ಗಮನಿಸಿ ವ್ಯಕ್ತಿಯನ್ನು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಜೊತೆಗೆ ಈ ಕೊಲೆ ಕೇಸ್ನಲ್ಲಿ ಭಾಗಿಯಾದ ನಿಕೋಲಸ್ ಮೆಟ್ಸನ್ ಸ್ನೇಹಿತ ಜೋಶುವಾ ಹ್ಯಾನ್‌ಕಾಕ್ ಅವರಿಗೆ ಯಾವ ಶಿಕ್ಷೆಯಾಗಲಿದೆ ಎಂದು ಕಾದು ನೋಡಬೇಕಾಗಿದೆ.






