ಇತರೆ

ಪತಿ ಮಗು ಬೇಕೆಂದರೆ, ಪತ್ನಿ ತಕ್ಷಣಕ್ಕೆ ಬೇಡವೆಂದು ನವ ದಂಪತಿಗಳ ಜಗಳ, ಪತ್ನಿಯನ್ನೇ ಕೊಂದ ಪತಿ

Views: 79

ಬೆಂಗಳೂರು:ಮಗು ಮಾಡಿಕೊಳ್ಳುವ ವಿಚಾರಕ್ಕೆ ನವದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಎಚ್ಎಎಲ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಮೂಲತಃ ಭಟ್ಕಳ ನಿವಾಸಿ ಗಿರಿಜಾ (30) ಕೊಲೆಯಾದ ನತದೃಷ್ಟೆ. ಆರೋಪಿ ಪತಿ ನವೀನ ಕುಮಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯವರಾದ ನವೀನ ಕುಮಾರ  ಮಾಡ್ರನ್ ಬ್ರೆಡ್ ಡಿಸ್ಟಿಬ್ಯೂಟರ್. ಇವರು ಅಂಗಡಿ ಹಾಗೂ ಬೇಕರಿಗಳಿಗೆ ಬ್ರೆಡ್ ಸರಬರಾಜು ವೃತ್ತಿ ಮಾಡುತ್ತಿದ್ದಾರೆ. ಯಶವಂತಪುರದಲ್ಲಿ ಈ ಹಿಂದೆ ಗಿರಿಜಾ ಪೊಷಕರು ನೆಲೆಸಿದ್ದ ಸಂದರ್ಭದಲ್ಲಿ ನವೀನ್ ಅವರಿಗೆ ಪರಿಚಯವಾಗಿದೆ. ಎರಡು ಕುಟುಂಬದವರೂ ಸೇರಿ ಎಂಟು ತಿಂಗಳ. ಹಿಂದೆಯಷ್ಟೇ ಗಿರಿಜಾ-ನವೀನ ಕುಮಾರ್ ವಿವಾಹ ಮಾಡಿಸಿದ್ದಾರೆ.

ದಂಪತಿ ಅನ್ನಸಂದ್ರ ಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಗೃಹಿಣಿ ಗಿರಿಜಾ ಮನೆಯಲ್ಲೇ ಇರುತ್ತಿದ್ದರು. ಗಿರಿಜಾ ಅವರಿಗೆ ಇತ್ತೀಚೆಗೆ ಅಬಾಶನ್ ಆಗಿತ್ತು. ನಂತರ ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮನಸ್ತಾಪವಾಗಿದೆ. ಪತಿ ಮಗು ಬೇಕೆಂದರೆ, ಪತ್ನಿ ತಕ್ಷಣಕ್ಕೆ ಬೇಡವೆಂದು ವಾದಿಸುತ್ತಿದ್ದು, ಇದೇ ವಿಚಾರ ತಾರಕಕ್ಕೇರಿ ಪತ್ನಿ ಕೊಲೆಯಲ್ಲಿ ಅಂತ್ಯ ಕಂಡಿದೆ.

Related Articles

Back to top button
error: Content is protected !!