ಇತರೆ

ಪತಿ ಬೇರೊಬ್ಬ ಮಹಿಳೆಯೊಂದಿಗೆ ಸುತ್ತಾಟ, ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ ರಸ್ತೆ ಮಧ್ಯದಲ್ಲೇ ತರಾಟೆ!  

Views: 100

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಕಾನ್ಸುರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಸುತ್ತಾಡುತ್ತಿರುವುದನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ರಾಷ್ಟ್ರೀಯ ಹೆದ್ದಾರಿಯು ಕೆಲಕಾಲ ಹೈಡ್ರಾಮಾದ ವೇದಿಕೆಯಾಗಿ ಮಾರ್ಪಟ್ಟಿತ್ತು.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈ ಘಟನೆ ಮಹಾರಾಜಪುರದ ನರ್ವಾಲ್ ಕ್ರಾಸಿಂಗ್ ಬಳಿ ನಡೆದಿದೆ ಎನ್ನಲಾಗಿದೆ. ತನ್ನ ಪತಿಯ ವರ್ತನೆಯ ಬಗ್ಗೆ ಮೊದಲೇ ಸಂಶಯ ಹೊಂದಿದ್ದ ಹೊಂದಿದ್ದ ಪತ್ನಿ, ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದರು.ಆಗ ಪತಿಯು ರಾಷ್ಟ್ರೀಯ ಹೆದ್ದಾರಿಯ ಜನ ನಿಬಿಡ ಪ್ರದೇಶದಲ್ಲಿ ತನ್ನ ಗೆಳತಿಯೊಂದಿಗೆ ಸುತ್ತಾಡುತ್ತಿರುವುದನ್ನು ಕಂಡಿದ್ದಾಳೆ.ಆಗ ತಕ್ಷಣವೇ ಪತ್ನಿ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಆರಂಭದಲ್ಲಿ ಮಾತಿನ ಚಕಮಕಿಯಿಂದ ಶುರುವಾದ ಈ ಜಗಳ, ನೋಡನೋಡುತ್ತಿದ್ದಂತೆಯೇ ತೀವ್ರ ವಿಕೋಪಕ್ಕೆ ತಿರುಗಿತು.ರಸ್ತೆಯ ಮಧ್ಯದಲ್ಲೇ ಏಕಾಏಕಿ ಪತ್ನಿ ಮತ್ತು ಪತಿಯ ನಡುವೆ ತೀವ್ರ ವಾಗ್ವಾದ ನಡೆದಿದೆ.ಈ ವೇಳೆ ಕೋಪಗೊಂಡ ಪತಿ, ಪತ್ನಿಯ ಮೇಲೆ ಕೈಮಾಡಿ ಕಪಾಳಮೋಕ್ಷ ಮಾಡಿದ್ದಾನೆ.ಇದೇ ವೇಳೆ ಪತಿಯ ಈ ವರ್ತನೆಯ ಬೆನ್ನಲ್ಲೇ ಆತನ ಗೆಳತಿ ಕೂಡ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ.

ಈಗ ಈ ಘಟನೆ ಇಡೀ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ‘ಟೂ ಸ್ಟೋರಿ’ ಎಂಬ ಎಕ್ಸ್ ಸಾಮಾಜಿಕ ಮಾಧ್ಯಮದ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ ಸಾರ್ವಜನಿಕ ಪ್ರದೇಶದಲ್ಲಿ ನಡೆದ ಈ ಕೌಟುಂಬಿಕ ಕಲಹದ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ವೇದಿಕೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Related Articles

Back to top button
error: Content is protected !!