ನೇಹಾ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್! ತಂದೆ ನಿರಂಜನ್ ಹಿರೇಮಠ ಆಕ್ರೋಶದ ಮಾತುಗಳೇನು?

Views: 221
ನೇಹಾ ಹತ್ಯೆ ವಿಚಾರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ ಇಂಥಾದೊಂದು ಹೇಳಿಕೆಯನ್ನು ನೀಡಿ ವಿವಾದಕ್ಕೆ ಕಾರಣವಾಗಿದೆ. ಹುಬ್ಬಳಿಯಲ್ಲಿ ನಡೆದಿರೋ ಘಟನೆ ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿ ನಡೆದಿದೆ, ಯಾವಾಗ ಆ ಹೆಣ್ಣುಮಗಳು ದೂರ ಹೋಗಲು ಶುರು ಮಾಡಿದ್ದಳೋ ಆ ಹುಡುಗ ಹೋಗಿ ಚುಚ್ಚಿದ್ದಾನೆ. ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದಿದ್ದಾರೆ.

ನೇಹಾ ಹಿರೇಮಠ್ ತನ್ನನ್ನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ನಿರಾಕರಿಸಿದ ನಂತರ, ಆರೋಪಿ ಫಯಾಜ್ ಚಾಕುವಿನಿಂದ ಅನೇಕ ಬಾರಿ ಇರಿದು ಆಕೆಯನ್ನು ಹತ್ಯೆ ಮಾಡಿದ್ದಾನೆ. ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೆಯವರನ್ನು ಮದುವೆಯಾಗುತ್ತಾಳೆ ಎಂಬ ಕೋಪದ ಭರದಲ್ಲಿ ಯುವಕ ಆಕೆಯನ್ನು ಕೊಂದಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು
ಗೃಹ ಸಚಿವರ ಡಾ. ಜಿ ಪರಮೇಶ್ವರ್ ಹೇಳಿಕೆ ಬಗ್ಗೆ ಹತ್ಯೆಯಾಗಿರೋ ನೇಹಾ ತಂದೆ ನಿರಂಜನ್ ಹಿರೇಮಠ ಕೆಂಡ ಕಾರಿದ್ದಾರೆ. ಆರೋಪಿ ಇಷ್ಟ ಪಟ್ಟರೆ ಅದು ಒನ್ ಸೈಡ್ ಲವ್ ಆಗುತ್ತೆ. ನನ್ನ ಮಗಳು ಇಷ್ಟ ಪಟ್ಟಿದ್ರೆ ಆಕೆ ಯಾಕೆ ಸಾಯುತ್ತಿದ್ದಳು? ಅಂತ ಪ್ರಶ್ನೆ ಮಾಡಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರೋರೆ ಈ ರೀತಿ ಹೇಳಿಕೆ ಕೊಟ್ಟರೆ ಎಲ್ಲಿ ಹೋಗಿ ಸಾಯೋದು. ನಾನು ಒಬ್ಬ ಕಾಂಗ್ರೆಸ್ ಕಾರ್ಪೊರೇಟರ್, ನನ್ನ ಪರಿಸ್ಥಿತಿಯೇ ಹೀಗಾದ್ರೆ ಜನ ಸಾಮನ್ಯರ ಪರಿಸ್ಥತಿ ಹೇಗೆ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸದ್ಯ ಆರೋಪಿ ಫಯಾಜ್ನನ್ನ ಕೋರ್ಟ್ಗೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಹತ್ಯೆ ಆರೋಪಿ ಫಯಾಜ್ನನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹುಬ್ಬಳ್ಳಿ ಘಟನೆ ಸಂಬಂಧ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಪೋಲಿಸ್ ಆಯುಕ್ತರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿರೋ ಸಿಎಂ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳೋದಕ್ಕೆ ತಾಕೀತು ಮಾಡಿದ್ದಾರೆ.
ಮಗಳನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಈ ದೌರ್ಜನ್ಯಕ್ಕೆ ಕೊನೆ ಎಂಬುದು ಇಲ್ವಾ? ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.






