ರಾಜಕೀಯ

ನೂತನ ಸಕಾ೯ರದ ಸ್ವಾಗತಕ್ಕೆ ಸಜ್ಜು

Views: 0

ಕನಾ೯ಟಕ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸಕಾ೯ರವನ್ನು ಸ್ವಾಗತಿಸಲು ವಿಧಾನ ಸೌಧ ಸಜ್ಜಾಗಿದೆ.

ಶನಿವಾರ ಮುಖ್ಯಮಂತ್ರಿ – ಉಪಮುಖ್ಯಮಂತ್ರಿ ಸಹಿತ ಹಲವು ಸಚಿವರು ಪ್ರಮಾಣವಚನ ಸ್ವೀಕರಿಸಲು ವಿಧಾನ ಸೌಧ- ವಿಕಾಸ ಸೌಧ ಸಿಂಗರಿಸಿ ಸಜ್ಜುಗೊಳಿಸಲಾಗಿದೆ.

ಜನಾದೇಶಕ್ಕೆ ತಕ್ಕಂತೆ ಜನಪರವಾದ ಆಡಳಿತ ನೀಡುವ ಗುರುತರ ಹೊಣೆಗಾರಿಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯ ಅವರ ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ. ಮೊದಲ ಹಂತದಲ್ಲಿ 28 ಸಚಿವರು ಪ್ರಮಾಣ ವಚನ ಸ್ವೀಕರಿಸಿಸಲಿದ್ದಾರೆ.

ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ಸಂಪುಟದಲ್ಲೇ 5 ಗ್ಯಾರಂಟಿ ಜಾರಿಮಾಡಲು ಅಧಿಕೃತ ಘೋಷಣೆಗೆ ಅಧಿಕಾರಿಗಳಿಂದ ಸಂಪುಟ ಅಜೆಂಡಾ ಸಿದ್ಧಪಡಿಸಲು ಸೂಚಿಸಲಾಗಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲಿ ಉಚಿತ ವಿದ್ಯುತ್ ಘೋಷಣೆಗೆ ಅಂಗೀಕರಿಸುವ ಸಾಧ್ಯತೆ ಇದೆ, ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಗ್ಯಾರಂಟಿಗಳ ಜಾರಿಗೆ ಅಧಿಕೃತ ಮುದ್ರೆಯೂ ಬೀಳುವ ಸಾಧ್ಯತೆ ಇದೆ.

ಕಾಂಗ್ರೆಸ್ ಕನಾ೯ಟಕದಲ್ಲಿ ತನ್ನ ಶಕ್ತಿ ಪ್ರದಶ೯ನದ ವೇದಿಕೆಯನ್ನಾಗಿಸಿ, ಕಹಳೆ ಮೊಳಗಿಸಲು ಸಿದ್ಧತೆ ನಡೆಸಿದ್ಧು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.

Related Articles

Back to top button
error: Content is protected !!