ಇತರೆ
ನಿಲ್ಲದ ಹಿಂಸಾಚಾರ : ಶಾಂತಿ ಸ್ಥಾಪನೆಗೆ ಸಮಿತಿ ರಚನೆ

Views: 8
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ವಿವಿಧ ಜನಾಂಗಗಳ ನಡುವೆ ಶಾಂತಿ ಸ್ಥಾಪನೆಗೆ ಸರಳೀಕರಣಕ್ಕಾಗಿ ಮತ್ತು ಮಾತುಕತೆ ನಡೆಸಲು ಕೇಂದ್ರ ಸರಕಾರವು ಶನಿವಾರ ಮಣಿಪುರ ರಾಜ್ಯಪಾಲರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಕೇಂದ್ರ ಗೃಹ ಸಚಿವಾಲಯ ತಿಳಿಸಿದಂತೆ ಶಾಂತಿ ರಚನಾ ಸಮಿತಿಗೆ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಮಾಜದ ಮುಖಂಡರು ಇದ್ದಾರೆ ಎಂದು ತಿಳಿಸಿದ್ದಾರೆ.






