ರಾಜಕೀಯ

ನಾಳೆ (ಎ. 29) ಸಿದ್ದಾಪುರದಲ್ಲಿ ಅಮಿತ್ ಶಾ ರೋಡ್ ಶೋ

Views: 0

ಕುಂದಾಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎ. 29 ರಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಸಿದ್ದಾಪುರ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ.

ಸಂಜೆ 4 ಗಂಟೆಗೆ ಸಿದ್ದಾಪುರದ ಪೇಟೆಯಲ್ಲಿ ರೋಡ್ ಶೋ ನಡೆಸಿ, ತೆರೆದ ವಾಹನದಲ್ಲೇ ಜನರನ್ನು ಉದ್ದೇಶಿಸಿ ಮಾತನಾಡುವರು. ಈ ಸಂದಭ೯ 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟಿಹೊಳೆ ಸಹಿತ ಹಲವಾರು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.

ಬದಲಿ ಸಂಚಾರ   ಕುಂದಾಪುರ ಹಾಗೂ ಉಡುಪಿ – ಬಾರಕೂರು ಮಾಗ೯ದಿಂದ ಆಗಮಿಸುವ ವಾಹನಗಳನ್ನು ಅಂಪಾರು ಪೇಟೆಯಲ್ಲಿ ಎಡ ಭಾಗಕ್ಕೆ ತಿರುಗಿಸಿ, ನೆರಳಕಟ್ಟೆಯ ಮೂಲಕ ಬಾಂಡ್ಯ ಆಜ್ರಿಯ ಮೂಲಕ ಸಾಗಿ ಸಿದ್ದಾಪುರ ಕಮಲಶಿಲೆ ಕ್ರಾಸ್ ನಲ್ಲಿ ರಾಜ್ಯ ಹೆದ್ದಾರಿಗೆ ಸೇರಿಕೊಳ್ಳಬೇಕು.

ಶಿವಮೊಗ್ಗ ಹಾಗೂ ಘಟ್ಟದ ಮೇಲಿನಿಂದ ಬರುವ ವಾಹನಗಳನ್ನು ಕೂಡ ಇದೇ ಮಾಗ೯ವಾಗಿ ಸಾಗಿ ಕುಂದಾಪುರ ಬಾರಕೂರು ಉಡುಪಿಗೆ ಬರಬೇಕು.

Related Articles

Back to top button
error: Content is protected !!