ಇತರೆ

“ನಾನು ನನ್ನ ಪತ್ನಿಯನ್ನು ಬಿಟ್ಟು ಬರುತ್ತೇನೆ, ನೀನು ನನ್ನ ಜೊತೆ ಬಾ” ಪ್ರೀತಿ ನಿರಾಕರಿಸಿದ ವಿವಾಹಿತೆ ಮಹಿಳೆಯನ್ನು ಜೀವ ತೆಗೆದ ಕಿರಾತಕ..?

Views: 219

ಕನ್ನಡ ಕರಾವಳಿ ಸುದ್ದಿ: ಪ್ರೀತಿ ನಿರಾಕರಿಸಿದ ವಿವಾಹಿತ ಮಹಿಳೆಯನ್ನ ಕಾರು ಸಮೇತ ಸಿನಿಮೀಯ ರೀತಿಯಲ್ಲಿ ಕರೆಗೆ ತಳ್ಳಿ ಜೀವ ತೆಗೆಯಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಸದ್ಯ ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಆಕೆಯ ಕುಟುಂಬಸ್ಥರು ಪ್ರಕರಣ ದಾಖಲು ಮಾಡಿದ್ದಾರೆ.

ಬೇಲೂರಿನ ನಿವಾಸಿ ಶ್ವೇತಾ (32) ಜೀವ ಕಳೆದುಕೊಂಡ ಮಹಿಳೆ. ಮದುವೆ ಆಗಿದ್ದ ರವಿ ಎನ್ನುವ ವ್ಯಕ್ತಿ ಹಾಸನದಲ್ಲಿ ಕೆಲಸ ಮಾಡುವಾಗ ಮಹಿಳೆಗೆ ಪರಿಚಯವಾಗಿದ್ದನು. ಗಂಡನಿಂದ ದೂರವಾಗಿದ್ದ ಮಹಿಳೆ ತಂದೆ, ತಾಯಿ ಜೊತೆ ವಾಸವಿದ್ದರು. ರವಿ ಪರಿಚಯ ಇದ್ದಿದ್ದರಿಂದ ಒತ್ತಾಯವನ್ನು ಶ್ವೇತಾ ನಿರಾಕರಣೆ ಮಾಡಿದ್ದರು.

ಶ್ವೇತಾ ತಮ್ಮ ಗಂಡನಿಂದ ದೂರವಾಗಿ ತವರು ಮನೆಯಲ್ಲಿದ್ದರು. ಹಾಸನದಲ್ಲಿ ಕೆಲಸ ಮಾಡುವಾಗ ಶ್ವೇತಾ ಅವರಿಗೆ ರವಿ ಎಂಬಾತನ ಜೊತೆ ಪರಿಚಯವಾಗಿತ್ತು.ಈ ವೇಳೆ, ರವಿ ಶ್ವೇತಾ ಅವರಿಗೆ. “ನಾನು ನನ್ನ ಪತ್ನಿಯನ್ನು ಬಿಟ್ಟು ಬರುತ್ತೇನೆ, ನೀನು ನನ್ನ ಜೊತೆ ಬಾ” ಎಂದು ಪ್ರಸ್ತಾಪಿಸಿದ್ದ. ಆದರೆ, ಶ್ವೇತಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಈ ನಿರಾಕರಣೆಯಿಂದ ಕೋಪಗೊಂಡ ರವಿ, ಶ್ವೇತಾ ಅವರನ್ನು ಕೊಲೆ ಮಾಡಿರುವ ಶಂಕೆಯಿದೆ.

ರವಿ ಈಜಿಕೊಂಡು ದಡ ಸೇರಿದರೆ, ಶ್ವೇತಾ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೊಲೀಸರ ಎದುರು ರವಿ, “ಕಾರು ಆಕಸ್ಮಿಕವಾಗಿ ಕೆರೆಗೆ ಬಿದ್ದಿತು. ನನ್ನ ಗೆಳತಿ ಕಾರಿನಲ್ಲಿದ್ದಳು, ನಾನು ಈಜಿಕೊಂಡು ದಡಕ್ಕೆ ಬಂದೆ” ಎಂದು ಹೇಳಿಕೆ ನೀಡಿದ್ದಾನೆ.

ಅರೆಹಳ್ಳಿ ಪೊಲೀಸರು ರವಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣ ಅರೆಹಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನದಿಂದ ತನ್ನ ಕಾರಿನಲ್ಲಿ ರವಿ, ಶ್ವೇತಾರನ್ನು ಕರೆದುಕೊಂಡು ಚಂದನಹಳ್ಳಿ‌ ಕೆರೆ ಬಳಿಗೆ ಬಂದಿದ್ದರು. ಶ್ವೇತಾ ಕಾರಿನಲ್ಲಿ ಇರುವಾಗಲೇ ಕಾರು ಸಮೇತ ಕೆರೆಗೆ ತಳ್ಳಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಶ್ವೇತಾ ಕುಟುಂಬದ ಸದಸ್ಯರ ದೂರು ಆಧರಿಸಿ ಕೊಲೆ ಕೇಸ್ ಅನ್ನು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.

 

 

 

Related Articles

Back to top button