ನಟ-ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಮುಗಿಯದ ‘ಕರಾವಳಿ’ ವಿವಾದ!
Views: 41
ಕನ್ನಡ ಕರಾವಳಿ ಸುದ್ದಿ: ಪ್ರಜ್ವಲ್ ದೇವರಾಜ ನಾಯಕನಾಗಿ ಬಿಡುಗಡೆಯ ಹೊಸ್ತಿಲ್ಲಲ್ಲಿದೆ. ಈ ಹೊತ್ತಲ್ಲೇ ವಿವಾದ ಭುಗಿಲೆದ್ದಿದೆ. ನಟ ಪ್ರಜ್ವಲ್ ದೇವರಾಜ್ ಮತ್ತು ಸಿನಿಮಾ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸಂಭಾವನೆ ವಿಚಾರದಲ್ಲಿ ಮುನಿದಿರುವ ಪ್ರಜ್ವಲ್ ಟ್ರೇಲರ್ಗೂ ಡಬ್ ಮಾಡಿರಲಿಲ್ಲ.
ಪ್ರಜ್ವಲ್ ದೇವರಾಜ್ ಅವರಿಗೆ ಕೊಡಲು ಬಾಕಿ ಇದ್ದ ಹಣವನ್ನು ಟ್ರೇಲರ್ ಬಿಡುಡಗೆಯಾದ ಮರುದಿನವೇ ಅಧಿಕೃತವಾಗಿ ಪಾವತಿಸಲಾಗಿದೆ. ಪ್ರಜ್ವಲ್ ಅವರು ಕರಾವಳಿ ಚಿತ್ರದಲ್ಲಿನ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುವುದಾಗಿ ಒಪ್ಪಿಕೊಂಡಿದ್ದರು, ಅದು ಕಥೆಗೆ ಬಹುಮುಖ್ಯ ಅಂಶವಾಗಿತ್ತು.
ಅದೇ ಕಾರಣಕ್ಕಾಗಿ ಅಷ್ಟು ದೊಡ್ಡ ಮೊತ್ತ ಸಂಭಾವನೆಯಾಗಿ ಕೊಡಲು ನಿರ್ಮಾಣ ಸಂಸ್ಥೆ ಒಪ್ಪಿಕೊಂಡಿತ್ತು. ಆದರೆ ಮೇಲ್ನೋಟಕ್ಕೆ ದೈಹಿಕ ರೂಪಾಂತರ ಸಾಧ್ಯವಾಗದೇ ಇದ್ದಿದ್ದರಿಂದ ಉಳಿದ ಹಣವನ್ನು ಬಾಕಿಯಾಗಿ ಉಳಿಸಿಕೊಳ್ಳಲಾಗಿತ್ತು.
ಪ್ರಜ್ವಲ್ ಬಾಕಿ ಹಣವನ್ನು ಕೊಡದಿದ್ದರೆ ಡಬ್ಬಿಂಗ್ ಮಾಡುವುದಿಲ್ಲವೆಂದು ಹೇಳಿದ್ದರಿಂದ, ಅವರಿಗಾಗಿ ಎರಡು ತಿಂಗಳು ಕಾದ ನಂತರ, ಅನಿವಾರ್ಯವಾಗಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಲಾಯಿತು. ಈ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಅವರನ್ನು ಹಲವಾರು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಸಿನಿಮಾ ರಂಗದ ಪ್ರಮುಖರು ಮತ್ತು ನಿರ್ಮಾಪಕರು ಪ್ರತ್ಯೇಕವಾಗಿ ಸಂಪರ್ಕಿಸಿ. ಮಧ್ಯಸ್ಥಿಕೆಗೆ ಪ್ರಯತ್ನಿಸಿದರಾದರು ಅದು ವಿಫಲವಾಯಿತು. ಬಾಕಿ ಹಣ ಪಾವತಿ ಯಾಗದೆ ಕರಾವಳಿ ಚಿತ್ರದ ಯಾವುದೇ ಕೆಲಸಗಳಲ್ಲಿಯೂ ಭಾಗಿಯಾಗುವುದಿಲ್ಲ ವೆಂದು ಪ್ರಜ್ವಲ್ ತಿರಸ್ಕರಿಸಿದ್ದರು ಎಂದು ಚಿತ್ರತಂಡ ಹೇಳಿದೆ.
ಟ್ರೇಲರ್ನಲ್ಲಿ ಅವರ ದನಿ ಇಲ್ಲ ಎನ್ನುವುದು ನಟ ಪ್ರಜ್ವಲ್ ದೇವರಾಜ್ ಅವರಿಗೆ ತಿಳಿದಿತ್ತು ಮತ್ತು ಬೇರೆಯವರಿಂದ ಮಾಡಿಸಲಾಗಿತ್ತು ಎಂದು ಹೇಳಿರುವ ಚಿತ್ರತಂಡ, ಬಾಕಿ ಇರುವ ಹಣ ತಲುಪಿದ ಮೇಲೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಖಾತೆಗಳಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿರುವವರ ವಿರುದ್ದ ತನಿಖೆ ನಡೆಸುವಂತೆ ಚಿತ್ರತಂಡ ದೂರು ದಾಖಲಿಸಿದೆ.






