ಜನಮನ

ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಮನೆಗಳು ಜಲಾವೃತ, ಸಂಚಾರಕ್ಕೆ ಅಡ್ಡಿ

Views: 0

 

 

ಬೆಂಗಳೂರಿನಲ್ಲಿ ಕುಂಭ ದ್ರೋಣ ಮಳೆಯ ಪರಿಣಾಮ ಕೆಲವೆಡೆ ಜಲಾವೃತಗೊಂಡಿದೆ. ಕೆ. ಆರ್ ವೃತ್ತದಲ್ಲಿನ ಅಂಡರ್ ಪಾಸಿನಲ್ಲಿ ಸಿಲುಕಿ ತೀವೃ ಅಸ್ವಸ್ಥಗೊಂಡ ಮಹಿಳೆ ಚಿಕಿತ್ಸೆಗೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರವಿವಾರ 30 ಮಿ. ಮೀ ಮಳೆಯಾಗಿದ್ದು, ಮಳೆಯ ಆಭ೯ಟಕ್ಕೆ ಸಿಲಿಕಾನ್ ಸಿಟಿಯೇ ಅಸ್ತವ್ಯಸ್ತವಾಗಿದೆ. ನಗರದಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಹಲವಾರು ಮರಗಳು ಧರೆಗುರುಳಿದೆ. ಕಾರು ಬೈಕ್ ಗಳ ಮೇಲೆ ಮರಬಿದ್ದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಮಳೆಯ ಪ್ರಕೋಪಕ್ಕೆ ತತ್ತರಿಸಿ ಹೋಗಿದೆ.

ಇನ್ನೂ ಎರಡು ದಿನಗಳ ಕಾಲ ಮಳೆಯ ಆಭ೯ಟ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಮತ್ತು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನಲ್ಲಿಯೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Related Articles

Back to top button
error: Content is protected !!