ಇತರೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದ.ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಪಲಿತಾಂಶ ವಿವರ ಇಲ್ಲಿದೆ..

Views: 181

ಬೆಂಗಳೂರು, 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್‌ 10) ಬುಧವಾರ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈಗಾಗಲೇ ಫಲಿತಾಂಶ ಬಿಡುಗಡೆ ಮಾಡಿದ್ದು, ಬೆಳಗ್ಗೆ 11 ಗಂಟೆ ನಂತರ ಫಲಿತಾಂಶ https://karesults.nic.in ವೆಬ್ ಸೈಟ್‌ನಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ.

ಈ ಬಾರಿ 84.87% ಬಾಲಕಿಯರು ಉತ್ತೀರ್ಣರಾಗಿದ್ದು, 76.98% ಬಾಲಕರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ.

ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ವಿವರ

1 ದಕ್ಷಿಣ ಕನ್ನಡ 97.37%

2 ಉಡುಪಿ 96.80%

3 ವಿಜಯಪುರ 94.89%

4 ಉತ್ತರ ಕನ್ನಡ 92.51%

5 ಕೊಡಗು 92.13%

6 ಬೆಂಗಳೂರು ದಕ್ಷಿಣ 89.57%

7 ಬೆಂಗಳೂರು ಉತ್ತರ 88.67%

8 ಶಿವಮೊಗ್ಗ 88.58%

9 ಚಿಕ್ಕಮಗಳೂರು 88.20%

10 ಬೆಂಗಳೂರು ಗ್ರಾಮಾಂತರ 87.55%

11 ಬಾಗಲಕೋಟೆ 87.54%

12 ಕೋಲಾರ 86.12%

13 ಹಾಸನ 85.83%

14 ಚಾಮರಾಜನಗರ 84.99%

15 ಚಿಕ್ಕೋಡಿ 84.10%

16 ರಾಮನಗರ 83.58%

17 ಮೈಸೂರು 83.13%

18 ಚಿಕ್ಕಬಳ್ಳಾಪುರ 82.84%

19 ಬೀದರ್ 81.69%

20 ತುಮಕೂರು 81.03%

21 ದಾವಣಗೆರೆ 80.96%

22 ಕೊಪ್ಪಳ 80.83%

23 ಧಾರವಾಡ 80.70%

24 ಮಂಡ್ಯ 80.56%

25 ಹಾವೇರಿ 78.36%

26 ಯಾದಗಿರಿ 77.29%

27 ಬೆಳಗಾವಿ 77.20%

28 ಕಲಬುರಗಿ 75.48%

29 ಬಳ್ಳಾರಿ 74.70%

30 ರಾಯಚೂರು 73.11%

31 ಚಿತ್ರದುರ್ಗ 72.92%

32 ಗದಗ 72.86%

 

Related Articles

Back to top button
error: Content is protected !!