ಜನಮನ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಾಣಿ ಬಲಿ ತಡೆಗೆ ಬೇಕಿದೆ ಬೇಲಿ

Views: 2

ಕುಂದಾಪುರ: ಶ್ರೀ ವಾದಿರಾಜರ ಜನ್ಮಕ್ಷೇತ್ರ ಹೂವಿನಕೆರೆ ಸಮೀಪಲ್ಲಿಯೇ ಹಾದು ಹೋಗುವ ರೈಲ್ವೆ ಹಳಿಯಿಂದ ಹಾದುಹೋಗುವ ದಾರಿಯಲ್ಲಿ ಹಸಿ ಹುಲ್ಲನ್ನು ಹುಡುಕಿ ಬರುವ ಜಾನುವಾರುಗಳು ರೈಲಿಗೆ
ಸಿಲುಕಿ ಸಾವನ್ನಪ್ಪುತ್ತಿರುವ ಘಟನೆ ಅಸೋಡು ಗ್ರಾಮದ ಹೂವಿನಕೆರೆಯಲ್ಲಿ ನಿರಂತರ ನಡೆಯುತ್ತಿದೆ.

ಯಾವುದೇ ತಡೆ ಬೇಲಿ ಇಲ್ಲದಿರುವ ಈ ಹಳಿಯ ಇಕ್ಕೆಲದ ದಾರಿಯಲ್ಲಿ ದನ, ಕರು, ಕೋಣಗಳು ಒಂದೇ ಸವನೆ ಭಾರಿ ಶಬ್ದದಿಂದ ರೈಲು ಹತ್ತಿರಕ್ಕೆ ಬಂದಾಗ ಆ ಮೂಕ ಪ್ರಾಣಿಗಳು ದಿಕ್ಕು ತೋಚದೆ ಅಡ್ಡಾದಿಡ್ಡಿ ಓಡಾಡಿ ರೈಲಿಗೆ ಸಿಕ್ಕಿ ಸಾವನಪ್ಪುತ್ತಿವೆ. ಜನರು ಮಾತ್ರ ರೈಲ್ವೆ ಇಲಾಖೆಯವರು ವಿಧಿಸುತ್ತಿರುವ ದಂಡಕ್ಕೆ ಹೆದರಿ ಆ ಪ್ರಾಣಿಗಳು ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಸುರಕ್ಷಾ ದೃಷ್ಟಿಯಿಂದ ಪರಿ ಪರಿಯಾಗಿ ಮನವಿ ಮಾಡಿಕೊಂಡರೂ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಗಲಿಲ್ಲ.
ಇನ್ನಾದರೂ ಸ್ಥಳೀಯ ಕಾಳಾವರ, ಕೆದೂರು ಪಂಚಾಯಿತಿ ಹಾಗೂ
ರೈಲ್ವೆ ಇಲಾಖೆಯವರು ಮಾನವೀಯ ದೃಷ್ಟಿಯಿಂದ ಹೆಚ್ಚಿನ ನಿಗಾ ವಹಿಸಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಾಣಿಗಳ ಬಲಿಯನ್ನು ತಡೆಯಲು ತಂತಿ ಬೇಲಿಯನ್ನು ನಿಮಿ೯ಸಬೇಕಾಗಿದೆ. ಕೇವಲ ಕೃಷಿ ಕಾಯ೯ಗಳಿಗೆ ಅನುಕೂಲವಾಗುವಂತೆ ಹೊರೆಯಾಳುಗಳಿಗೆ ಮಾತ್ರ ಬಿಟ್ಟು ಉಳಿದ ಕಡೆ ಬೇಲಿ ಹಾಕಿದರೆ ಪ್ರಾಣಿಬಲಿ ತಪ್ಪಿಸಬಹುದು.

Related Articles

Back to top button
error: Content is protected !!