ಆರೋಗ್ಯ

ದಿಢೀರ್ ಬಿಪಿಎಲ್ ಕಾರ್ಡ್ ರದ್ದು!…ಕಂಗೆಟ್ಟ ಫಲಾನುಭವಿಗಳು

Views: 151

ಕನ್ನಡ ಕರಾವಳಿ ಸುದ್ದಿ: ಕುಟುಂಬದ ಒಬ್ಬ ಸದಸ್ಯ ತೆರಿಗೆ ಪಾವತಿದಾರರಾದರೆ ರಾಜ್ಯ ಸರಕಾರದ ಅನ್ನಭಾಗ್ಯ ಅಕ್ಕಿ ಸೇರಿ ಸೌಲಭ್ಯ ಪಡೆಯಲು ನೆರವಾಗಿರುವ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತಿರುವುದು ಫಲಾನುಭವಿಗಳು ಕಂಗೆಟ್ಟಿದ್ದಾರೆ.

ಮನೆಯಲ್ಲಿರುವ ಒಬ್ಬ ಸದಸ್ಯ ಆದಾಯ ತೆರಿಗೆ ಇಲಾಖೆಗೆ ಐಟಿಆರ್‌ (ಆದಾಯ ತೆರಿಗೆ ರಿಟನ್ಸ್‌ರ್‍) ಮಾಡಿಸಿದರೆ, ಇನ್ನುಳಿದವರನ್ನು ಸಹ ಬಿಪಿಎಲ್‌ ಕಾರ್ಡ್‌ನಿಂದ ಹೊರ ಹಾಕಿದರೆ ಹೇಗೆ? ಎಂಬ ಪ್ರಶ್ನೆ ಉದ್ಬವವಾಗಿದೆ.

ವರ್ಷಗಳಿಂದ ಹೊಸದಾಗಿ ಸರಕಾರದಿಂದ ಯಾವುದೇ ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಆಹ್ವಾನಿಸಿಲ್ಲ. ಈ ನಡುವೆ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಕುಟುಂಬದ ಸದಸ್ಯರು ಉದ್ಯೋಗ, ವ್ಯಾಪಾರ ಸೇರಿ ನಾನಾ ಕಾರಣಕ್ಕಾಗಿ ತೆರಿಗೆ ಪಾವತಿ ಆರಂಭಿಸಿದ್ದಾರೆ. ಮದುವೆಯಾಗಿರುವ ಕೆಲವರು ಹೊಸ ಕಾರ್ಡ್‌ಗೆ ಅರ್ಜಿ ಹಾಕಲು ಅವಕಾಶವಿಲ್ಲದೆ, ಹಳೆ ಕಾರ್ಡ್‌ನಲ್ಲಿಯೇ ಮುಂದುವರಿದಿದ್ದಾರೆ. ಕುಟುಂಬದ ಒಬ್ಬ ವ್ಯಕ್ತಿ ತೆರಿಗೆದಾರನಾದ ಕೂಡಲೇ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಬಿಪಿಎಲ್‌ ಕಾರ್ಡ್‌ ರದ್ದಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಹೊಲವಿಲ್ಲದ, ಯಾವುದೇ ಹೆಚ್ಚಿನ ಆದಾಯವಿಲ್ಲದ ಕುಟುಂಬಗಳು ಬಿಪಿಎಲ್‌ ಕಾರ್ಡ್‌ನ ರದ್ದತಿಯಿಂದಾಗಿ ಸರಕಾರದ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಕೆಲವರು ಅನರ್ಹರಿದ್ದರೂ ಬಿಪಿಎಲ್‌ ಕಾರ್ಡ್‌ ಪಡೆದು ಸರಕಾರಿ ಸೌಲಭ್ಯ ಪಡೆಯುತ್ತಿದ್ದಾರೆ.

ನಮ್ಮ ಕುಟುಂಬದ ಅಂತ್ಯೋದಯ ಕಾರ್ಡ್‌ನಲ್ಲಿ ಸಹೋದರನೊಬ್ಬ ತೆರಿಗೆ ಪಾವತಿ ಮಾಡುತ್ತಿದ್ದಾನೆ. ಸಹೋದರ ಮದುವೆಯಾಗಿ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ. ಆತನ ಕಾರಣಕ್ಕೆ ತಾಯಿ ಒಳಗೊಂಡಂತೆ ನಮ್ಮ ಕುಟುಂಬದ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಆದಾಯ ಕುಟುಂಬದ ಎಲ್ಲರ ಆದಾಯವಲ್ಲ. ಹೀಗಾಗಿ ಸರಕಾರ ಈ ವಿಚಾರ ಗಂಭೀರವಾಗಿ ಪರಿಗಣಿಸಿ, ನಿಯಮ ಸರಳೀಕರಣಗೊಳಿಸಬೇಕು. ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬುವುದು ಫಲಾನುಭವಿಗಳು.

Related Articles

Back to top button
error: Content is protected !!