ಇತರೆ
ತ್ರಾಸಿ ಮರಕ್ಕೆ ಆಟೋ ಢಿಕ್ಕಿ : ಸಹ ಪ್ರಯಾಣಿಕ ಸಾವು

Views: 2
ಕುಂದಾಪುರ : ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ರಸ್ತೆಯ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಸಹ ಪ್ರಯಾಣಿಕ ಮೃತ ಪಟ್ಟ ಘಟನೆ ತ್ರಾಸಿ ಮೊವ್ವಾಡಿ ಎಂಬಲ್ಲಿ ಬಾನುವಾರ ನಡೆದಿದೆ.
ರಿಕ್ಷಾ ಚಾಲಕ ಗುರುರಾಜ್ ಎನ್ನುವರು ಸಹ ಪ್ರಯಾಣಿಕನನ್ನು ಕುಳ್ಳುರಿಸಿಕೊಂಡು ಪ್ರಯಾಣಿಸುವಾಗ ರಸ್ತೆಯ ಬದಿಯ ಮರಕ್ಕೆ ಢಿಕ್ಕಿಯಾಗಿ ಸಹ ಪ್ರಯಾಣಿಕ ಭಾಸ್ಕರ್ (33) ಎಂಬುವವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾಗ೯ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಪ್ರಕರಣ ಗಂಗೊಳ್ಳಿ ದಾಖಲಾಗಿದೆ.






