ತರಗತಿಯೊಳಗೇ ಶಿಕ್ಷಕ- ಶಿಕ್ಷಕಿ ಅನುಚಿತ ವರ್ತನೆ: ರೊಮ್ಯಾನ್ಸ್ ವಿಡಿಯೊ ವೈರಲ್ !
Views: 316
ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಕೌಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ತರಗತಿಯೊಳಗೇ ಅನುಚಿತವಾಗಿ ವರ್ತಿಸಿದ್ದಾರೆ. ಈ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.
ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ತರಗತಿ ಕೊಠಡಿಯ ಒಳಗೇ ರೊಮ್ಯಾನ್ಸ್ ಮಾಡಿದ್ದಾರೆ. ವರದಿಗಳ ಪ್ರಕಾರ ಶಿಕ್ಷಕನ ಪತ್ನಿಗೆ ತನ್ನ ಪರಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದಳು. ಹೀಗಾಗಿ ಆತನ ಪತ್ನಿ, ಸಾಕ್ಷಿ ಕಲೆಹಾಕಲು ತರಗತಿ ಕೊಠಡಿಯೊಳಗೆ ರಹಸ್ಯ ಕ್ಯಾಮರಾವನ್ನು ಅಳವಡಿಸಿದ್ದಳು. ಈ ಕ್ಯಾಮರಾದಲ್ಲಿ ಇಬ್ಬರೂ ಶಾಲಾ ಅವಧಿಯಲ್ಲೇ ಅಸಭ್ಯವಾಗಿ ವರ್ತಿಸಿರುವುದು ಕಂಡು ಬಂದಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಸಂದೀಪ್ ಕುಮಾರ್ ಸೌರಿಖ್‌ನ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವಿಶ್ವನಾಥ್ ಪಾಠಕ್ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಈ ಕೃತ್ಯ ಪರಿಶೀಲಿಸಿದ ನಂತರ ರಾಜ್ಯ ಶಿಕ್ಷಣ ಇಲಾಖೆ ಇಬ್ಬರನ್ನೂ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಂಡಿದೆ. ಈ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮತ್ತು ವೃತ್ತಿಪರ ನಡವಳಿಕೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಮಾನತು ಅವಧಿಯಲ್ಲಿ ಶಿಕ್ಷಕನನ್ನು ಗುಗರಾಪುರ ಬ್ಲಾಕ್ ರಿಸೋರ್ಸ್ ಸೆಂಟರ್ ಹಾಗೂ ಶಿಕ್ಷಕಿಯನ್ನು ತಲಗ್ರಾಮ್ ಬಿಆರ್‌ಸಿಗೆ ನಿಯೋಜಿಸಲಾಗಿದೆ. ಈ ವಿಡಿಯೊ ವೈರಲ್ ಆದ ಬಳಿಕ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲೆಗಳು ನೈತಿಕ ಮೌಲ್ಯಗಳಿಗೆ ಮೀಸಲಾದ ಸುರಕ್ಷಿತ ಸ್ಥಳಗಳಾಗಿ ಉಳಿಯಬೇಕು. ಈ ರೀತಿ ವರ್ತನೆ ತೋರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆಟ್ಟಿಗರು ಸೂಚಿಸಿದ್ದಾರೆ.






