ಡಿಕೆಸಿ ಸಿಎಂ ಪಟ್ಟಕ್ಕೆ ಬಿಗಿಯಾದ ಪಟ್ಟು : ಬಗೆಹರಿಯದ ಬಿಕ್ಕಟ್ಟು

Views: 0
ರಾಹುಲ್ ಗಾಂಧಿ ಸೂತ್ರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಡಿಕೆಸಿ ಉಪ ಮುಖ್ಯಮಂತ್ರಿ ಘೋಷಣೆಗೆ ಡಿಕೆಸಿ ನನಗೆ ಸಿಎಂ ಪಟ್ಟ ನೀಡಿಯೇ ನೀಡಬೇಕು ಎಂಬ ಪಟ್ಟು ಸಡಿಲಿಕೆಯಾಗಿಲ್ಲ
ಸಿದ್ದರಾಮಯ್ಯ ಪ್ರಥಮ 2 ವಷ೯ದ ಅವಧಿಗೆ ಮುಖ್ಯಮಂತ್ರಿ, ಮುಂದಿನ 2 ವಷ೯ದ ಅವಧಿಗೆ ಡಿಕೆಸಿ ಡಿಸಿಎಂ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಿದ್ದುಗೆ 18 ಸ್ಥಾನ ಡಿಕೆಸಿಗೆ 10 ಸ್ಥಾನ ಗೆಲ್ಲುವಂತೆ ಟಾಸ್ಕ್ ನೀಡಲಾಗಿದೆ.
ಡಿಕೆಸಿ ಮಾತ್ರ ಸಿಎಂ ಪಟ್ಟಿನಿಂದ ಹೊರಬರದೆ ನನಗೆ ಸಿಗದಿರುವ ಸಿಎಂ ಪಟ್ಟ ಖಗೆ೯ಗೆ ನೀಡಿ, ಸಿದ್ದರಾಮಯ್ಯ ಸಿಎಂ ಆಗುದಾದರೆ ಅವರ ಕ್ಯಾಬಿನೆಟ್ ನಲ್ಲಿ ಇರೋದಿಲ್ಲ, ಡಿಸಿಎಂ ಬೇಡ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹಠ ಹಿಡಿದಿದ್ದಾರೆ. ಸಿದ್ದರಾಮಯ್ಯ ನನಗೆ ನೀಡುವುದಾದರೆ ಸಿಎಂ ನೀಡಿ ಅದನ್ನು ಬಿಟ್ಟು ಇನ್ಯಾವ ಹುದ್ದೆ ನೀಡುತ್ತೀರಿ ?, ಇಲ್ಲವಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದಿದ್ದಾರೆ.
ಡಿಕೆಸಿ ಹಿಡಿದಿರುವ ಪಟ್ಟಿಗೆ ಅವರ ಮನವೊಲಿಸಲು ಖಗೆ೯ ನಿವಾಸದಲ್ಲಿ ಪ್ರಿಯಾಂಕ ವಾದ್ರಾ ಮಧ್ಯ ಪ್ರವೇಶಿಸಿದ್ದಾರೆ. ಆದರೂ ಬಿಕ್ಕಟ್ಟು ಬಗೆಹರಿಯದ ಕಾರಣ ಸೋನಿಯಾ ಗಾಂಧಿ ಮೇ. 20 ವೇಳೆಗೆ ದಿಲ್ಲಿಗೆ ಬಂದಾಗ ನನ್ನ ನಿಧಾ೯ರ ತಿಳಿಸುತ್ತೇನೆ ಇಲ್ಲವಾದರೆ ಇಂದೇ ನಾನೇ ಸಿಎಂ ಘೋಷಣೆ ಮಾಡಿ ಎಂದು ಡಿಕೆಸಿ ತಿಳಿಸಿದ್ದಾರೆ.






