ಶಿಕ್ಷಣ

ಜ್ಞಾನದಾ ಶಿಕ್ಷಣ ಸಂಸ್ಥೆಯ ಶಿಕ್ಷಕ ಮಂಜುನಾಥ್ ನಾಯ್ಕ್ ಇವರಿಗೆ ಉಡುಪಿ ಜಿಲ್ಲೆಯ ಆದರ್ಶ ಶಿಕ್ಷಕ ಪ್ರಶಸ್ತಿ

Views: 20

ಕನ್ನಡ ಕರಾವಳಿ ಸುದ್ದಿ: ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ ನಾಯ್ಕ್ ಇವರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇವರು ಉತ್ತಮ ಕ್ರೀಡಾಪಟು, ಕಬಡ್ಡಿ ಆಟಗಾರ ಮತ್ತು ತರಬೇತಿದಾರರಾದ ಇವರ ನಿಷ್ಠಾವಂತ, ಸರಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಡುಪಿ ಜಿಲ್ಲೆ ಮತ್ತು ಆದರ್ಶ ಆಸ್ಪತ್ರೆಯವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಶಸ್ತಿಯನ್ನು ಸೆಪ್ಟೆಂಬರ್ 7ರಂದು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. 

ಶ್ರೀಯುತರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಮಚಂದ್ರ ಬಿ ಶಿರೂರ್ಕರ್, ಕಾರ್ಯದರ್ಶಿ ಶ್ರೀ ಧೀರಜ್ ಆರ್ ಶಿರೂರ್ಕರ್ , ಟ್ರಸ್ಟಿ ಶ್ರೀಮತಿ ಚಂಪಾ ಆರ್ ಶಿರೂರ್ಕರ್, ಪ್ರಾಂಶುಪಾಲ ಡಾ. ರವಿದಾಸ್ ಶೆಟ್ಟಿ, ಶಿಕ್ಷಕ ಮತ್ತು ಶಿಕ್ಷಕೇತರವರ್ಗ ಹಾಗೂ ವಿದ್ಯಾರ್ಥಿಗಳು ಪ್ರಶಂಸಿಸಿ, ಶುಭಕೋರಿರುತ್ತಾರೆ.

Related Articles

Back to top button