ರಾಜಕೀಯ

ಜೆಡಿಎಸ್ ಪಕ್ಷದಿಂದ ಸಿ.ಎಂ ಇಬ್ರಾಹಿಂ ಅಮಾನತು; ಹೆಚ್.ಡಿ‌.ದೇವೇಗೌಡರಿಂದ  ಆದೇಶ

Views: 0

ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಸಿ.ಎಂ ಇಬ್ರಾಹಿಂ ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿ.ಎಂ ಇಬ್ರಾಹಿಂ ಅವರನ್ನು ತಕ್ಷಣದಿಂದ ಜಾರಿಯಾಗುವಂತೆ ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.

ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆಯನ್ನು ವಿರೋಧಿಸಿದ್ದ ಸಿ.ಎಂ ಇಬ್ರಾಹಿಂ ಅವರು ಒರಿಜಿನಲ್ ಜೆಡಿಎಸ್ ಪಕ್ಷ ನಮ್ಮದೇ. ನಿಜವಾದ ಜಾತ್ಯಾತೀತ ಜನತಾ ದಳವನ್ನು ಕಟ್ಟುತ್ತೇನೆ ಎಂದು ಗುಡುಗಿದ್ದರು. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ಮಾತನಾಡಿದ್ದರು.

ಸಿ.ಎಂ ಇಬ್ರಾಹಿಂ ಅವರ ಈ ರಾಜಕೀಯ ನಡೆಗೆ ಇದೀಗ ಹೆಚ್.ಡಿ ದೇವೇಗೌಡರೇ ಬ್ರೇಕ್ ಹಾಕಿದ್ದಾರೆ. ಕಳೆದ ನವೆಂಬರ್ 15ರಂದು ಕೇರಳದ ತಿರುವನಂತಪುರಂ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷದ ವಿರೋಧಿ ಹೇಳಿಕೆಯನ್ನು ಸಿ.ಎಂ ಇಬ್ರಾಹಿಂ ನೀಡಿದ್ದಾರೆ ಎಂಬ ಕಾರಣದಿಂದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ‌.ದೇವೇಗೌಡರು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Related Articles

Back to top button
error: Content is protected !!