ರಾಜಕೀಯ
ಜೂ. 4 ರಂದು ಕೋಟೇಶ್ವರದಲ್ಲಿ ಬಿಜೆಪಿ ಅವಲೋಕನ ಸಭೆ

Views: 0
ಕುಂದಾಪುರ : ಭಾರತೀಯ ಜನತಾ ಪಕ್ಷ ಕುಂದಾಪುರ ಮಂಡಲ ಅವಲೋಕನ ಸಭೆ ಜೂನ್ 4 ರಂದು ರವಿವಾರ ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ ಭಾಗವಹಿಸಲಿದ್ದಾರೆ.
ಕುಂದಾಪುರ ಕ್ಷೇತ್ರದ 222 ಬೂತ್ ಅಧ್ಯಕ್ಷರು, 51 ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪ್ರಧಾನ ಕಾಯ೯ದಶಿ೯ಗಳು, ಮಂಡಲದ 61 ಪಧಾದಿಕಾರಿಗಳು, ಎಲ್ಲಾ ಮೋಚಾ೯ದ ಅಧ್ಯಕ್ಷರು, ಪ್ರಧಾನ ಕಾಯ೯ದಶಿ೯ಗಳು, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಕುಂದಾಪುರ ಪುರಸಭೆ, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.






